ಕಲಬುರಗಿ| ಶಾಮನೂರು ಶಿವಶಂಕರಪ್ಪ ಅವರಿಗೆ ಶೃದ್ಧಾಂಜಲಿ ಸಭೆ

ಕಲಬುರಗಿ(ಕಾಳಗಿ): ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಕಾಳಗಿ ತಾಲೂಕು ವೀರಶೈವ ಸಮಾಜದ ಯುವ ಮುಖಂಡ ಜಗದೀಶ್ ಮಾಲಿಪಾಟೀಲ್ ಹೇಳಿದರು.
ಕಾಳಗಿ ಪಟ್ಟಣದ ಹಳೆಬಸ್ ನಿಲ್ದಾಣ ಆವರಣದಲ್ಲಿ ನವ ತರುಣ ಬಸವ ಬಳಗದ ವತಿಯಿಂದ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಗದೀಶ್ ಮಾಲಿಪಾಟೀಲ್, ಶಿವಶಂಕರಪ್ಪನವರು ಕೊಡಗೈದಾನಿಗಳಾಗಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ತಮ್ಮ ಸ್ವಂತ ಹಣದಿಂದ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದರು ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರು ಧಾರ್ಮಿಕ ಪರಂಪರೆಯ ಗುರು ವಿರಕ್ತರನ್ನು ಒಂದುಗೂಡಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಜೊತೆಗೆ ಹಲವು ದಶಕಗಳ ಪಂಚಪೀಠದ ಜಗದ್ಗುರುಗಳ ಸಮಸ್ಯೆಯನ್ನು ಬಗೆಹರಿಸಿ ದಾವಣಗೆರೆಯಲ್ಲಿ ಪಂಚಪೀಠ ಜಗದ್ಗುರುಗಳ ಒಂದುಗೂಡಿಸಿ ಧಾರ್ಮಿಕ ಸಮಾವೇಶ ಯಶಸ್ವಿಗೊಳಿಸಿದ್ದಾರೆ. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಏಕತೆಯನ್ನು ಸಾರಿದ್ದಾರೆ. ಇಂದು ಅವರ ನಿಧನ ಸಮಾಜಕ್ಕೆ ಅಪಾರ ನಷ್ಟಉಂಟು ಮಾಡಿದೆ ಎಂದು ಹೇಳಿದರು.
ಡೊಣ್ಣೂರಿನ ಪೂಜ್ಯ ವೀರಭದ್ರಪ್ಪ ಅಜ್ಜ, ವೀರಶೈವ ಸಮಾಜದ ಯುವ ಮುಖಂಡರಾದ ಅಮೃತರಾವ್ ಪಾಟೀಲ್, ರೇವಣಸಿದ್ಧಪ್ಪ ಕಲಶೆಟ್ಟಿ, ಚಂದ್ರಶೇಖರ್ ಮಾನಶೆಟ್ಟಿ, ಬಸವರಾಜ ಹುಡದಳ್ಳಿ, ಬಂಡಪ್ಪ ಬೊಮ್ಮಣ್ಣಿ, ಕಾಳು ಪಡಶೆಟ್ಟಿ, ರವಿ ಬಿರೆದಾರ, ಶರಣು ಮುಕರಂಬಿ, ರಾಜು ಸಲಗೂರ, ಸಿದ್ರಾಮಪ್ಪ ಕಮಲಾಪೂರ, ಮಲ್ಲಿಕಾರ್ಜುನ ಮಳಗಿ, ಶಿವಕಿರಣ ಪ್ಯಾಟಿಮಠ, ಕಾಳಪ್ಪ ಕದ್ದರಗಿ, ರೇವಣಸಿದ್ಧ ಹರಕಂಚಿ, ಬಸವರಾಜ ಕದ್ದರಗಿ, ಮೊಗಲಪ್ಪ ಚಿದ್ರಿ, ರೇವಣಸಿದ್ಧ ಪರುತೆ, ಕಾಳು ಸಂಕಾನೋರ, ಉದಯಕುಮಾರ್ ಸುಂಠಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







