ನೋಂದಣಿಯಾಗದ ಆರೆಸ್ಸೆಸ್‌ಗೆ ಪಥಸಂಚಲನಕ್ಕೆ ಅನುಮತಿ ನೀಡಬಾರದು: ಜ್ಞಾನಪ್ರಕಾಶ್ ಸ್ವಾಮೀಜಿ

ಕಲಬುರಗಿ : ಚಿತ್ತಾಪುರದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನ ಕುರಿತ ಅರ್ಜಿ ವಿಚಾರಣೆಯನ್ನು ನಾಳೆ ಕಲಬುರಗಿ ಹೈಕೋರ್ಟ್‌ನಲ್ಲಿ ನಡೆಯಲಿದೆ. ಈ ವೇಳೆ ಜ್ಞಾನ ಪ್ರಕಾಶ್ ಸ್ವಾಮೀಜಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರಿಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳನ್ನು ಖಂಡಿಸಿ ಗುರುವಾರ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಣಿ ಹೊಂದಿಲ್ಲದ ಸಂಘಟನೆಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನುಮತಿ ನೀಡಿದರೆ, ಅದು ನ್ಯಾಯಾಂಗದ ಸ್ವಾಯತ್ತತೆ ಮತ್ತು ಸಂವಿಧಾನದ ಮೌಲ್ಯಕ್ಕೆ ತಕ್ಕುದಾಗಿರುವುದಿಲ್ಲ. ‘‘ಯಾವ ಸಂಘ ನೊಂದಣಿ ಹೊಂದಿದೆ ಮತ್ತು ಯಾವುದು ಇಲ್ಲ ಎಂಬುದನ್ನು ಪರಿಶೀಲಿಸಿ ಮಾತ್ರ ತೀರ್ಪು ನೀಡಬೇಕು. ಯಾವುದೇ ಅನಧಿಕೃತ ಅನುಮತಿ ದೇಶದ ಸಂವಿಧಾನ ಮತ್ತು ಸುಮಾರು 140 ಜನರ ಹಿತಾಸಕ್ತಿಗೆ ಹಾನಿಯಾಗಬಹುದು’’ ಎಂದು ಎಚ್ಚರಿಸಿದ್ದಾರೆ.
Next Story





