ತೊಗರಿ, ಕಡಲೆ ಬೆಳೆಯ ಸಮಸ್ಯೆಗೆ ಕೃಷಿವಾಸ ಆ್ಯಪ್ ಬಳಸಿ: ಡಾ. ಹನುಮಂತಪ್ಪ

ಕಲಬುರಗಿ: ಉಪಗ್ರಹದಿಂದ ರೈತರು ತಮ್ಮ ಮೊಬೈಲ್ ನಲ್ಲಿ ಕೃಷಿವಾಸ ಆ್ಯಪ್ ಬಳಸಿ ತೊಗರಿ ಮತ್ತು ಕಡಲೆ ಬೆಳೆಯ ನೈಜ ಪರಿಸ್ಥಿತಿಯನ್ನು ಜಿಯೋಟ್ಯಾಗ್ ಮಾಡುವ ಮೂಲಕ ಬೆಳೆಯ ವಿವಿದ ಹಂತಗಳಲ್ಲಿ ಬಾಧಿಸುವ ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆ ಮಾಡುಲು ಸೂಕ್ತ ಸಲಹೆಗಳನ್ನು ನೀಡುವುದು ಸ್ಮಾರ್ಟ್ ಕ್ರಾಪ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಹನುಮಂತಪ್ಪ ತಿಳಿಸಿದರು.
ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಸ್ ಬಿಐ ಫೌಂಡೇಶನ್ ಅನುದಾನಿಕ ಸಂಶೋಧನೆ ಯೋಜನೆ, ಇಕ್ರಿಸ್ಕಾಟ್ ಮತ್ತು ಆಗಿಬಿಡ್ ಹೈದ್ರಾಬಾದ್ ಸಂಸ್ಥೆ ಒಡಂಬಡಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 20 ತಾಲೂಕಗಳ ಆಯ್ದ 4800 ರೈತರು ಭಾಗಿಯಾಗಲಿದ್ದಾರೆ. ಈ ಯೋಜನೆಯ ಉದ್ದೇಶ ರೈತರಿಗೆ ಪರಿಚಯಿಸಲು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೃಷಿಯಲ್ಲಿ ನೂತನ ತಂತ್ರಜ್ಞಾನ ಸುಧಾರಿತ ಬೀಜ, ಜೈವಿಕ ಗೊಬ್ಬರ ಅವಶ್ಯಕತೆಗನುಗುಣವಾಗಿ. ಶಿಪಾರಸ್ಸು ಮಾಡಿದ ಗೊಬ್ಬರ ಮತ್ತು ಕೀಟನಾಶಕದ ಮಾಹಿತಿ ಮತ್ತು ಸರಕಾರದ ಸಬ್ಸಿಡಿ ಯೋಜನೆಗಳ ಬಗ್ಗೆ ತಿಳಿಯಲು ಬಹಳಷ್ಟು ಆ್ಯಪ್ ಗಳು ಸದುಪಯೋಗ ಪಡೆದುಕೊಳ್ಳಬೆಕೆಂದು ಸಲಹೆ ನೀಡಿದರು.
ಈ ಯೋಜನೆಯ ಸಂಯೋಜಕ ಡಾ. ಎ.ಜಿ. ಶ್ರೀನಿವಾಸ ಮಾತನಾಡಿ ಈ ಯೋಜನೆಯ ಮೂರು ವರ್ಷಗಳ ಕಾಲವಧಿಯಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ, ಚಿತ್ತಾಪುರ, ಆಳಂದ, ಸೇಡಂ, ಅಫಜಲಪೂರ ತಾಲೂಕಗಳಲ್ಲಿ ಕೈಗೊಂಡಿದ್ದು ಪ್ರತಿ ತಾಲೂಕಿನಲ್ಲಿ ನಾಲ್ಕು ಹಳ್ಳಿಗಳಲ್ಲಿ 30 ರಂತೆ 600 ತೊಗರಿ ಮತ್ತು ಕಡಲೆ ಬೆಳೆಯುವ ರೈತರನ್ನು ಆಯ್ಕೆ ಮಾಡಲಾಗಿದೆ ಎಂದರು.
ಉಳಿಸಿದ್ದು ಗಳಿಸಿದ್ದಕ್ಕೆ ಸಮ ಎನ್ನುವ ಹಾಗೆ ಕೀಟನಾಶಕ, ಗೊಬ್ಬರ ಮತ್ತು ಇತರ ಪರಿಕರಗಳ ಮಿತ ಬಳಕೆಯಿಂದ ಖರ್ಚು ಕಡಿಮೆ ಮಾಡಿ ಇಳುವರಿ ಹೆಚ್ಚಿಸಿ ಆದಾಯ ದ್ವಿಗುಣಗೊಳಿಸುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ. ರಾಜು ತೆಗ್ಗಳ್ಳಿ, ಯುಸುಫಾಬಿ (ಬೇಸಾಯಶಾಸ್ತ್ರ), ಮೋಹನ, ಡಾ. ವಿಶ್ವರಾಜ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತಿರಿದ್ದರು.







