ಸರ್ಕಾರಿ ನೌಕರರ ಸಂಘದ ಆಳಂದ ತಾಲ್ಲೂಕು ಉಪಾಧ್ಯಕ್ಷರಾಗಿ ವಿಜಯಕುಮಾರ್ ಎಸ್.ಜಿಡಗೆ ಆಯ್ಕೆ

ಕಲಬುರಗಿ : ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಆಳಂದ ತಾಲೂಕಿನ ಉಪಾಧ್ಯಕ್ಷರಾಗಿ ವಿಜಯ ಕುಮಾರ್ ಎಸ್.ಜಿಡಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ಹೇಳಿದ್ದಾರೆ.
ಸಂಘದ ನಿಯಮನುಸರವಾಗಿ ಆಳಂದ ತಾಲ್ಲೂಕಿನ ಸಂಘದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆ ಬಲಪಡಿಸಬೇಕು , ತಾಲ್ಲೂಕಿನಾದ್ಯಂತ ಸರಕಾರಿ ನೌಕರರ ಹಿತ ಕಾಯಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
Next Story





