ವಾಡಿ | ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷರಾಗಿ ಹಾರಕೂಡ ನೇಮಕ

ವಾಡಿ : ಸ್ಥಳೀಯ ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಅವರನ್ನು ಕರ್ನಾಟಕ ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಅಧ್ಯಕ್ಷೆ ಶೈಲಾ ಕೆ.ಡಿ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಮತ್ತು ವಿಭಾಗಿಯ ಪದಾಧಿಕಾರಿಗಳ ಸಭೆಯಲ್ಲಿ ಈ ನೇಮಕ ಮಾಡಿದ್ದು, ಸಂಘದ ಬಲವರ್ಧನೆಗೆ ಹಾಗೂ ಪೌರ ನೌಕರರ ಹಕ್ಕು ರಕ್ಷಣೆ ಅಂತ ಮಹತ್ವವಾಗಿರುವುದರಿಂದ ಮುಂದಿನ ಆದೇಶದವರೆಗೆ ಮಲ್ಲಿಕಾರ್ಜುನ ಹಾರಕೂಡ ಅವರನ್ನು ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಸನ್ಮಾನಿಸಿ ಶುಭ ಹಾರೈಸಿದರು. ಪೂಜಾ ಫುಲಾರೆ, ಈಶ್ವರ ಅಂಬೇಕರ್, ಪ್ರಕಾಶ, ಲತಾಮಣಿ, ವಿರುಪಾಕ್ಷ. ಕೆ, ಮಲ್ಲಿಕಾರ್ಜುನ ಯಳಸಂಗಿ, ಬಸವರಾಜ ಪೂಜಾರಿ, ಮನೋಜಕುಮಾರ ಹೀರೋಳ್ಳಿ, ರೇವಣಸಿದ್ದಪ್ಪ, ರೂಪಾ ಕುಲಕರ್ಣಿ, ಬಸಮ್ಮ ಪಾಟೀಲ, ಶಿವಕಾಂತಮ್ಮ ಎಸ್, ಜ್ಯೋತಿ ಗುತ್ತೇದಾರ, ಗುರಣ್ಣ ಚಿತ್ತಾಪುರ, ಸರ್ದಾರ್ ಖಾನ್, ಕೃಷ್ಣ ಸೇರಿದಂತೆ ಇತರರಿದ್ದರು.
Next Story




