ವಾಡಿ: ದಸಂಸ ನೂತನ ಪದಾಧಿಕಾರಿಗಳ ಆಯ್ಕೆ

ವಾಡಿ: ಪಟ್ಟಣದ ಲುಂಬಿಣಿ ಬುದ್ಧ ವಿಹಾರದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಪಟ್ಟಣ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ಸಾಯಬಣ್ಣ ಚಿತ್ತಾಪುರ (ವಾಡಿ ಸಂಚಾಲಕ), ಬಸವರಾಜ ಸಿರೂರಕರ್, ಶರಣು ದೊರೆ, ದೇವರಾಜ ಮಡಿವಾಳ (ಸಂಘಟನಾ ಸಂಚಾಲಕರು), ಲೋಕೇಶ ಶಿರೂರಕರ (ಖಜಾಂಚಿ), ವಾಸೀಂ ಅಕ್ರಮ, ಶೇಕ್ ನಿಸಾರ್ (ಕಾರ್ಯಕಾರಿ ಸಮಿತಿ ಸದಸ್ಯರು). ದಲಿತ ವಿದ್ಯಾರ್ಥಿ ಒಕ್ಕೂಟ: ರಾಕೇಶ ಶಿರೂರಕರ್ (ಸಂಚಾಲಕ), ಕಿರಣ ನಾಟಿಕಾರ, ಮಹ್ಮದ್ ಫಿರೋಜ್, ದೀನೇಶ ಮತ್ತಿಕೋಡ (ಸಂಘಟನಾ ಸಂಚಾಲಕರು), ರಘುವೀರ ಕಟ್ಟಿ (ಖಜಾಂಚಿ), ರಾಜು ಚಿತ್ತಾಪುರಕರ್, ಕಾಶಿನಾಥ ಕಟ್ಟಿ (ಕಾರ್ಯಕಾರಿ ಸಮಿತಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ.
ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೂರ, ಶರಣಬಸ್ಸು ಸಿರೂರಕರ, ಪ್ರಕಾಶ ಸಾವಿರೆ, ಭೀಮರಾಯ ಕೊಂಚೂರಕರ ಸೇರಿದಂತೆ ಇತರರಿದ್ದರು.
Next Story




