ವಿಶ್ವ ಹಿರಿಯ ನಾಗರಿಕರ ದಿನಾಚರಣೆ : ಕಲಬುರಗಿಯಲ್ಲಿ ಹಿರಿಯರ ಕ್ರೀಡಾಕೂಟಕ್ಕೆ ಚಾಲನೆ

ಕಲಬುರಗಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ಹಿರಿಯ ನಾಗರಿಕರ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ಕ್ರೀಡಾಕೂಟಕ್ಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಆಲದಾರ್ತಿ ಚಾಲನೆ ನೀಡಿ, ಹಿರಿಯ ನಾಗರಿಕರು ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
60 ರಿಂದ 69 ವರ್ಷ, 70 ರಿಂದ 79 ವರ್ಷ ಹಾಗೂ 80 ವರ್ಷ ಮೇಲ್ಪಟ್ಟವರು ಎಂಬ ಮೂರು ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ಏರ್ಪಡಿಸಲಾಗಿತ್ತು. ಮ್ಯೂಜಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಹಾಕುವ ಸ್ಪರ್ಧೆ ಹಾಗೂ ಗಾಯನ ಮತ್ತು ಏಕಾಭಿನಯ ಪಾತ್ರದಂತಹ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಹಿರಿಯ ನಾಗರಿಕರು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಕ್ರೀಡಾಕೂಟದ ಉದ್ದೇಶ ಹಾಗೂ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಸರ್ಕಾರಿ ಕಿವುಡ ಮಕ್ಕಳ ಶಾಲೆಯ ಅಧೀಕ್ಷಕ ಡಾ.ಲೋಕೇಶ್, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಲೋಯಾ, ನಿವೃತ್ತ ಸರ್ಕಾರಿ ನೌಕರರ ಸಂಘದ ವೀರಭೂಷಣ್, ವಿಕೆಜಿ ಸಂಸ್ಥೆಯ ಕಾರ್ಯದರ್ಶಿ ಸಿದ್ದಾರ್ಥ ಕೋರವಾರ, ಮುಖಂಡರಾದ ಅನಂತರಾಜ್, ಮಸ್ತಾನ್ ಬಿರಾದಾರ, ಲಿಂಗರಾಜ್ ತಾರಫೈಲ್, ಮಾತೋಶ್ರೀ ಸ್ವರಸ್ವತಿದೇವಿ ತಾಯಿ, ಖಾಜಾ ಫರಿದೂದಿನ್, ಇಲಾಖೆಯ ಸಿಬ್ಬಂದಿಗಳಾದ ವೀರೇಶ್ ಪತ್ತಾರ, ಮೇಘಾಂಜಲಿ, ಸ್ಮಿತಾ ಹಿರೇಮಠ, ಪ್ರಕಾಶ್ ಭಜಂತ್ರಿ, ಸಂತೋಷ್ ಪಟ್ಟೆದಾರಣ ಪ್ರಕಾಶ ಜಾಧವ್, ಸ್ವಪ್ನಾ ಪಾಟೀಲ್, ಪ್ರಕಾಶ ಜಗತಿ, ಪ್ರಕಾಶ ದ್ಯಾಬೇರಿ, ಅಫ್ಜಲ್, ಅನಂತನಾಗ್ ಕೇದಾರನಾಥ, ಕವಿತಾ, ಭವಾನಿ, ಜಯಶ್ರೀ ಇದ್ದರು.






