ಯಾದಗಿರಿ | ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂ.14 ರಂದು ಸಿಎಂಗೆ ಘೇರಾವ್: ಜಿಲ್ಲಾ ವಾಲ್ಮೀಕಿ ಸಮಾಜ ಎಚ್ಚರಿಕೆ

ಯಾದಗಿರಿ: ವಿವಿಧ ಎಂಟು ಬೇಡಿಕೆಗಳಿಗೆ ಆಗ್ರಹಿಸಿ ಜೂ.14 ರಂದು ನಗರಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಮಾರೆಪ್ಲ ನಾಯಕ ಮಗ್ದಂಪುರ ಮತ್ತು ಕೃಷ್ಣಪ್ಪಗೌಡ ಅಲ್ದಾಳ್ ಜಂಟಿಯಾಗಿ ಹೇಳಿದ್ದಾರೆ.
ಗುರುವಾರ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಡಿಗ್ರಿ ಕಾಲೇಜು ಸಮೀಪದಲ್ಲಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಸ್ಥಾಪನೆಗೆ ಸ್ಥಳದ ದಾಖಲೆ ನೀಡುವ ವಿಷಯದಲ್ಲಿ ನಗರಸಭೆ ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿದೆ. ಇದಕ್ಕೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಜರುಗಿಸಿ, ಕೂಡಲೇ ಇ-ಖಾತೆ ನೀಡಬೇಕೆಂದರು.
ಪರಿಶಿಷ್ಟ ಪಂಗಡದ ಇಲಾಖೆಗೆ ಕೂಡಲೇ ಸಚಿವರನ್ನು ನೇಮಿಸಬೇಕು, ಸಮಾಜದ ವಿದ್ಯಾರ್ಥಿಗಳಿಗೆ ಕೂಡಲೇ ಶಿಷ್ಯವೇತನ ಹಾಗೂ ಪ್ರೋತ್ಸಾಹ ಧನ ಆಯಾ ಆರ್ಥಿಕ ವರ್ಷದಲ್ಲಿಯೇ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಪದಾಧಿಕಾರಿಗಳಾದ ಸಿದ್ದಲಿಂಗಪ್ಪ ನಾಯಕ ಸಾಹೇಬಗೌಡ ಗೌಡಗೇರ, ಮರೆಪ್ಪ ಪ್ಯಾಟಿ, ದೊಡ್ಡಯ್ಯ ನಾಯಕ, ಹಣಮಂತ ನಾಯಕ ಖಾನಹಳ್ಳಿ, ಚಂದ್ರಕಾಂತ ಹತ್ತಿಕುಣಿ, ಶರಣಪ್ಪ ಜಾಕನಳ್ಳಿ, ಭೀಮರಾಯ ರಾಮಸಮುದ್ರ, ಮಲ್ಲಿಕಾರ್ಜುನ ಹೆಡಗಿಮದ್ರಿ, ಮಲ್ಲಿಕಾರ್ಜುನ ನಾಯಕ ನೀಲಹಳ್ಳಿ, ಬಸವರಾಜ ಕವಲ್ದಾರ, ಸಾಬಣ್ಣ ನಾಯಕ ಮುಂಡರಗಿ, ಭೀಮರಾಯ ಬಾಚವಾರ, ಸಿದ್ದಪ್ಪ ನಾಯಕ ಕೂಯಿಲೂರ, ಈಶಪ್ಪ ಹೆಡಗಿಮದ್ರಿ ಸೇರಿದಂತೆಯೇ ಇತರರಿದ್ದರು.







