ಯಡ್ರಾಮಿ | ಕೆಸರು ಗದ್ದೆಯಾದ ರಸ್ತೆ : ಭತ್ತ ನೆಟ್ಟು ಯುವಕರಿಂದ ಆಕ್ರೋಶ

ಕಲಬುರಗಿ: ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಯುವಕರು ಹಾಗೂ ಗ್ರಾಮಸ್ಥರು ಸೇರಿಕೊಂಡು ನಡುರಸ್ತೆಯಲ್ಲೇ ಭತ್ತದ ನಾಟಿಯನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.
ಯಡ್ರಾಮಿ ತಾಲೂಕಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಸಂಪರ್ಕಿಸುವ ಅನೇಕ ರಸ್ತೆಗಳು ಹದಗೆಟ್ಟಿವೆ, ಮಳೆ ಬಂದರೆ ಸಾಕು ರಸ್ತೆಗಳೆಲ್ಲ ಕೆಸರುಗದ್ದೆಯಾಗುತ್ತವೆ. ಹಲವು ಬಾರಿ ರಸ್ತೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರೂ, ಈ ವರೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಕೆಸರುಗದ್ದೆಯನ್ನು ನಾವು ರಸ್ತೆ ಎಂದು ತಿರುಗಾಡಬೇಕು. ಇಂತಹ ಅಭಿವೃದ್ಧಿಯ ಹರಿಕಾರ ಡಾ.ಅಜಯ್ ಸಿಂಗ್ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ, ಪ್ಲೇ ಕಾರ್ಡ್ ಬಳಸಿ ತಮ್ಮ ಮತಕ್ಷೇತ್ರದ ಶಾಸಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣು ಬಾನಕಾರ್, ಭೀಮರಾಯ ಅರಿಕೇರಿ, ನಿಂಗಪ್ಪ ಸನ್ನತಿ, ಅನಿಲ್ ಮನೇಲಿ, ಕುಮಾರ್ ತಳವಾರ, ಶಿವಣ್ಣಗೌಡ ಬಿರಾದಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Next Story





