ಕಲಬುರಗಿ| ಸ್ವಾಸ್ಥ್ಯ ಬದುಕಿಗೆ ಯೋಗ ಅತ್ಯಗತ್ಯ: ಡಾ.ಸಂತೋಷ್ ಸಿಂಗ್

ಕಲಬುರಗಿ(ಕಾಳಗಿ): ಸ್ವಾಸ್ಥ್ಯ ಬದುಕಿಗೆ ಯೋಗ ಅತ್ಯಗತ್ಯವಾಗಿದೆ ಎಂದು ಕಲಬುರಗಿ ಇಎಸ್'ಐ ಆಸ್ಪತ್ರೆ ವೈದ್ಯ ಡಾ.ಸಂತೋಷ್ ಸಿಂಗ್ ಹೇಳಿದರು.
ಕಾಳಗಿ ತಾಲೂಕಿನ ಗೋಟೂರ ಗ್ರಾಮದಲ್ಲಿ ಸಿದ್ಧಾರ್ಥ ಪದವಿಪೂರ್ವ ಕಾಲೇಜು ಕಾಳಗಿ ವತಿಯಿಂದ ಹಮ್ಮಿಕೊಂಡ ಎನ್.ಎಸ್.ಎಸ್ ಘಟಕದ ಶಿಬಿರದಲ್ಲಿ ಆರೋಗ್ಯ ಶಿಬಿರವನ್ನುದ್ದೇಶಿಸಿ ಮಾತನಾಡಿದ ಡಾ.ಸಂತೋಷ ಸಿಂಗ್, ಉತ್ತಮ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನವು ನಿಯಮಿತ ಯೋಗ ಮಾಡುವುದರಿಂದ ಮನಸ್ಸಿನ ಹಾಗೂ ದೇಹದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ರಾಧಿಕಾ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಶಂಕರ ಬಿ.ಕೊಡದೂರ, ಎನ್.ಎಸ್.ಎಸ್ ಅಧಿಕಾರಿ ಸಿದ್ದಣ್ಣ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಅವಿನಾಶ್ ಮೂಲಿಮನಿ, ಉಪನ್ಯಾಸಕ ಲಕ್ಷ್ಮೀಕಾಂತ ಗಂಗಾ, ಅರ್ಚನಾ ಕೊರವಾರ, ಡಾ.ರೋಹನ ಪಾಟೀಲ್, ದೇವಿಕಾ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





