Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ವಿವಿ ಪುರುಷ ಮತ್ತು ಮಹಿಳೆಯರ...

ಮಂಗಳೂರು ವಿವಿ ಪುರುಷ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್: ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡಗಳ ಪಾರಮ್ಯ

ವಾರ್ತಾಭಾರತಿವಾರ್ತಾಭಾರತಿ27 Jun 2023 9:53 PM IST
share
ಮಂಗಳೂರು ವಿವಿ ಪುರುಷ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್: ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡಗಳ ಪಾರಮ್ಯ

ಉಡುಪಿ, ಜೂ.27: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್ ಚಾಂಪಿಯನ್‌ಪ್‌ನಲ್ಲಿ ನಿರೀಕ್ಷೆಯಂತೆ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡಗಳು ಎರಡೂ ವಿಭಾಗಗಳಲ್ಲಿ ಪಾರಮ್ಯ ಮೆರೆದು ಪುರುಷ ಮತ್ತು ಮಹಿಳೆಯರ ತಂಡ ಪ್ರಶಸ್ತಿಗಳನ್ನು ಗೆದ್ದುಕೊಂಡವು.

ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಒಟ್ಟು 33 ಅಂಕ ಸಂಗ್ರಹಿಸಿ ಅಗ್ರಸ್ಥಾನಿಯಾದರೆ, ಆತಿಥೇಯ ತೆಂಕನಿಡಿಯೂರು ಕಾಲೇಜು ತಂಡ 21 ಅಂಕಗಳೊಂದಿಗೆ ರನ್ನರ್‌ಅಪ್ ಸ್ಥಾನ ಪಡೆಯಿತು. 20 ಅಂಕ ಪಡೆದ ಎಸ್‌ಡಿಎಂ ಕಾಲೇಜು ಉಡುಪಿ ಮೂರನೇ ಹಾಗೂ 16 ಅಂಕ ಪಡೆದ ಕೋಟ ಪಡುಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕನೇ ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಒಟ್ಟು 43 ಅಂಕ ಸಂಗ್ರಹಿಸಿ ಅಗ್ರಸ್ಥಾನದೊಂದಿಗೆ ತಂಡ ಪ್ರಶಸ್ತಿ ಪಡೆದರೆ, ಅಜ್ಜರಕಾಡಿನ ಡಾ ಜಿ.ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜು 41 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನಿಯಾಯಿತು. ಮೂರನೇ ಸ್ಥಾನ 33 ಅಂಕ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜಿನ ಪಾಲಾದರೆ, ಕಾರ್ಕಳದ ಶ್ರೀವೆಂಕಟರಮಣ ಮಹಿಳಾ ಕಾಲೇಜು 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.

ವೈಯಕ್ತಿಕ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ರಂಜಿತ್ ಜಿ. ಅತ್ಯುತ್ತಮ ಲಿಫ್ಟರ್ ಪ್ರಶಸ್ತಿ ಪಡೆದರೆ, ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರತೀಕ್ಷಾ ಗೆದ್ದು ಕೊಂಡರು.

ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಕೂಟದ ಆಯೋಜಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ: ಪುರುಷರ ವಿಭಾಗ:

59 ಕೆ.ಜಿ:1.ಚಂದ್ರಶೇಖರ್ ಕೆ., ಆಳ್ವಾಸ್ (ಒಟ್ಟು 525ಕೆ.ಜಿ.), 2.ಪ್ರಜ್ವಲ್, ಕೋಟ ಪಡುಕೆರೆ (465), 3.ಎಚ್.ಹಾಲೇಶ್, ತೆಂಕನಿಡಿಯೂರು (445). 66ಕೆ.ಜಿ.:1.ಶಶಾಂಕ್, ಕೋಟ ಪಡುಕೆರೆ (495), 2.ಆಕಾಶ್ ಪಾಲ್, ಎಸ್‌ಎಂಎಸ್ ಬ್ರಹ್ಮಾವರ (482.5), 3.ಶ್ರೀಧರ್, ಭಂಡಾರ್‌ಕಾರ್ಸ್‌ ಕುಂದಾಪುರ (480). 74ಕೆ.ಜಿ.: 1. ಪ್ರಜ್ವಲ್, ಎಸ್‌ಡಿಎಂ ಉಜಿರೆ (507.5), 2.ತಿಪ್ಪಣ್ಣ, ಎಸ್‌ಡಿಎಂ ಉಜಿರೆ (455), 3.ನಾಗೇಂದ್ರ, ಕೋಟ ಪಡುಕೆರೆ (450).

83ಕೆ.ಜಿ.: 1.ಸುಮಂತ, ಮಿಲಾಗ್ರಿಸ್ ಕಲ್ಯಾಣಪುರ (662.5), 2.ಶರತ್, ತೆಂಕನಿಡಿಯೂರು (660), 3.ರೋಹನ್ ಕೆ., ಎಸ್‌ಎಂಎಸ್ ಬ್ರಹ್ಮಾವರ (555). 93ಕೆ.ಜಿ.:1. ರಂಜಿತ್, ಆಳ್ವಾಸ್ (720), 2.ಜೇಮ್ಸ್ ಕರೀ, ಆಳ್ವಾಸ್ (545). 105ಕೆ.ಜಿ.: ಪ್ರತ್ಯುಷ್, ಆಳ್ವಾಸ್ (585), 2.ಕೆ.ಎಸ್. ನಿಶ್ಚಿತ ರೈ, ಎಸ್‌ಡಿಎಂ ಉಜಿರೆ (530), 3.ಮಹಮ್ಮದ್ ಆಶೀರ್, ಮಿಲಾಗ್ರಿಸ್ ಮಂಗಳೂರು (430).

120ಕೆ.ಜಿ.:1.ರೋಹನ್, ತೆಂಕನಿಡಿಯೂರು (612.5), 2.ನಾಗೇಂದ್ರ ಅಣ್ಣಪ್ಪ ನಾಯ್ಕ್, ಆಳ್ವಾಸ್ (550), 3.ತ್ರಿಶೂಲ್ ಆರ್.ಆಂಚನ್, ಮಿಲಾಗ್ರಿಸ್ ಕಲ್ಯಾಣಪುರ (532.5). 120+ಕೆ.ಜಿ.: 1.ಪ್ರಥ್ವಿ ಕುಮಾರ್, ಎಸ್‌ಡಿಎಂ ಬಿಬಿಎಂ ಮಂಗಳೂರು (550), 2.ರಾಹುಲ್ ಜಿ.ಕೆ., ಪದುವಾ ಮಂಗಳೂರು (425), 3.ಕಾರ್ತಿಕ್, ತೆಂಕನಿಡಿಯೂರು(370).

ಮಹಿಳೆಯರ ವಿಭಾಗ:

47ಕೆ.ಜಿ.: 1.ರಶ್ಮಿತಾ, ಅಜ್ಜರಕಾಡು (262.5), 2.ಯಾಸ್ಮಿನ್ ಶೇಖ್, ಆಳ್ವಾಸ್ (250), 3.ಪೂಜಾ, ತೆಂಕನಿಡಿಯೂರು (230). 52 ಕೆ.ಜಿ.: 1. ಯುಕ್ತಿಕ, ಎಸ್‌ಡಿಎಂ ಉಜಿರೆ (277.5), 2.ಜೀವಿತಾ, ಎಸ್‌ಡಿಎಂ ಉಜಿರೆ (247.5), 3.ಕಾವ್ಯಶ್ರೀ ಯು. ಸರಕಾರಿ ಮಹಿಳಾ ಕಾಲೇಜು ಪುತ್ತೂರು (232.5).

57ಕೆ.ಜಿ.:1.ಐಶ್ವರ್ಯ, ಅಜ್ಜರಕಾಡು (355),2.ಅಶ್ವಿತಾ ಬಿ., ಎಸ್‌ಡಿಎಂ ಉಜಿರೆ (240), 3.ಜಸ್ಮಿತಾ, ಆಳ್ವಾಸ್ (222.5). 63ಕೆ.ಜಿ.: 1.ಸೌಮ್ಯ, ಅಜ್ಜರಕಾಡು (340), 2.ಅನುಷಾ, ಆಳ್ವಾಸ್ (292.5), 3.ಸಂಗೀತ ಎ.ಎಂ., ಎಸ್‌ಡಿಎಂ ಉಜಿರೆ (247.5).

69ಕೆ.ಜಿ.: 1.ತನುಷಾ, ಆಳ್ವಾಸ್ (340), 2.ಲಾವಣ್ಯ ರೈ, ಎಸ್‌ಡಿಎಂ ಉಜಿರೆ (315), 3, ಋತು, ಅಜ್ಜರಕಾಡ (275). 76ಕೆ.ಜಿ.: 1.ವಿತಾಶ್ರೀ, ಆಳ್ವಾಸ್(272.5), 2.ವೈಷಿಕಾ ಬಿ.ಎಚ್., ಸರಕಾರಿ ಕಾಏಜು ಕಾರ್‌ಸ್ಟ್ರೀಟ್ ಮಂಗಳೂರು(267.5), 3.ಹಿತಾಶ್ರೀ, ಎಸ್‌ಡಿಎಂ ಉಜಿರೆ (227.5).

84ಕೆ.ಜಿ.: 1.ವೈಷ್ಣವಿ, ಶ್ರೀವೆಂಕಟರಮಣ ಕಾರ್ಕಳ (260), 2.ಸುಷ್ಮಾ, ಅಜ್ಜರಕಾಡು (242.5), 3.ಧನ್ಯಾ, ಆಳ್ವಾಸ್ (240). 84+ಕೆ.ಜಿ.: 1. ಪ್ರತೀಕ್ಷಾ, ಆಳ್ವಾಸ್ (550), 2.ಪ್ರತಿಕ್ಷಾ, ಅಜ್ಜರಕಾಡು (530), 3. ಸಿತಾರಾ, ಆಳ್ವಾಸ್ (325).




share
ವಾರ್ತಾಭಾರತಿ
ವಾರ್ತಾಭಾರತಿ
Next Story
X