Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಪೋಸ್ಟ್ ಫುಕುಶಿಮಾ' ಅಣುಶಕ್ತಿ ಕ್ಷೇತ್ರದ...

'ಪೋಸ್ಟ್ ಫುಕುಶಿಮಾ' ಅಣುಶಕ್ತಿ ಕ್ಷೇತ್ರದ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ: ವೈಸ್ ಮಾರ್ಶಲ್ ಎ.ಪಿ.ಸಿಂಗ್

ಝೋಯಾ ಅಖ್ತರ್‌ರ ಕೃತಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ8 July 2023 6:35 PM IST
share
ಪೋಸ್ಟ್ ಫುಕುಶಿಮಾ ಅಣುಶಕ್ತಿ ಕ್ಷೇತ್ರದ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ: ವೈಸ್ ಮಾರ್ಶಲ್ ಎ.ಪಿ.ಸಿಂಗ್

ಹೊಸದಿಲ್ಲಿ: ಝೋಯಾ ಆಖ್ತರ್ ಫಾತಿಮಾ ಬರೆದಿರುವ, ಫುಕುಶಿಮಾ ದುರಂತದ ಹಿನ್ನೆಲೆಯಲ್ಲಿ ಅಣುಶಕ್ತಿಯ ಸುತ್ತಲಿನ ಸಂಕೀರ್ಣ ಸಮಸ್ಯೆಗಳನ್ನು ವಿಶ್ಲೇಷಿಸುವ ‘ದಿ ಎಮರ್ಜೆನ್ಸ್ ಆಫ್ ನ್ಯೂಕ್ಲಿಯರ್ ಪವರ್ ಇನ್ ಏಶ್ಯ ಪೋಸ್ಟ್ ಫುಕುಶಿಮಾ’ ಕೃತಿಯನ್ನು ಭಾರತೀಯ ವಾಯುಪಡೆಯ ಉಪ ವರಿಷ್ಠ ಏರ್ ಮಾರ್ಷಲ್ ಎ.ಪಿ.ಸಿಂಗ್ ಶುಕ್ರವಾರ ಬಿಡುಗಡೆಗೊಳಿಸಿದ್ದಾರೆ.

ಅವರು ಹೊಸದಿಲ್ಲಿಯ ಏರ್ ಫೋರ್ಸ್ ಆಡಿಟೋರಿಯಂನಲ್ಲಿ ನಡೆದ ಸಿಎಪಿಎಸ್ -ಐಐ ಎಸ್ ಎಸ್ ಜಂಟಿ ಅಂತರ್‌ರಾಷ್ಟ್ರೀಯ ಸಂಕಿರಣದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎ.ಪಿ.ಸಿಂಗ್, ನಮ್ಮ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸಿಕೊಳ್ಳು ವುದರ ಜೊತೆಗೆ ನಮ್ಮ ಇಂಧನ ಶಕ್ತಿಯ ಅಗತ್ಯಗಳನ್ನು ಸಮರ್ಥನೀಯವಾಗಿ ಪೂರೈಸುವ ಸವಾಲುಗಳ ಮೇಲೆ ಹಿಡಿತ ಸಾಧಿಸುವ ಕುರಿತಾಗಿ ನಡೆಯುತ್ತಿರುವ ಸಂವಾದಗಳಿಗೆ ಈ ಪುಸ್ತಕ ಕೃತಿಯು ಕೊಡುಗೆ ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಡಾ.ಅಖ್ತರ್ ಹುಸೇನ್ ಮತ್ತು ಹಸೀನಾ ಬಾನು ಅವರ ಪುತ್ರಿ ಝೋಯಾ ಅಖ್ತರ್ ಫಾತಿಮಾ ಅವರ ಈ ಕೃತಿಯು ಫುಕುಶಿಮಾ ಅಣುಶಕ್ತಿ ಸ್ಥಾವರ ದುರಂತದ ಆನಂತರ ಏಶ್ಯದಲ್ಲಿ ಪರಮಾಣು ಶಕ್ತಿ ಕ್ಷೇತ್ರದ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಪುಸ್ತಕವನ್ನು ಕೆಡಬ್ಲ್ಯು ಪಬ್ಲಿಷರ್ಸ್ ಪ್ರಕಟಿಸಿದೆ. ಲೇಖಕಿ ಪ್ರಸಕ್ತ ಕ್ಲೈಮೇಟ್-ಟೆಕ್ ಸ್ಟಾರ್ಟ್‌ಅಪ್ ಬ್ಲೂ ಸ್ಕೈ ಅನಾಲಿಟಿಕ್ಸ್‌ನಲ್ಲಿ ಹವಾಮಾನ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಝೋಯಾ ಅಖ್ತರ್ ದಿಲ್ಲಿಯ ರಕ್ಷಣಾ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್‌ನಲ್ಲಿ ಸಂಶೋಧನಾ ವಿದ್ವಾಂಸರಾಗಿದ್ದಾರೆ.

ಝೋಯಾ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಭೌಗೋಳಿಕ ರಾಜಕೀಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರು ವಿಮೆನ್ ಇನ್ ನ್ಯೂಕ್ಲಿಯರ್, ಇಂಡಿಯಾದ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಕ್ಲೈಮೇಟ್-ಟೆಕ್ ಸ್ಟಾರ್ಟ್‌ಅಪ್ ಬ್ಲೂ ಸ್ಕೈ ಅನಾಲಿಟಿಕ್ಸ್‌ನಲ್ಲಿ ಹವಾಮಾನ ಸಂಶೋಧನಾ ಸಹಾಯಕರಾಗಿದ್ದಾರೆ. ಕೆಡಬ್ಲ್ಯು ಪಬ್ಲಿಷರ್ಸ್ ಪ್ರಕಟಿಸಿದ ಪುಸ್ತಕ ‘ದಿ ಗ್ಲೋಬಲ್ ನ್ಯೂಕ್ಲಿಯರ್ ಲ್ಯಾಂಡ್‌ಸ್ಕೇಪ್: ಎನರ್ಜಿ, ನಾನ್-ಪ್ರೊಲಿಫರೇಶನ್ ಆ್ಯಂಡ್ ಡಿಸಾರ್ಮಮೆಂಟ್’ನ ಎರಡು ಅಧ್ಯಾಯಗಳನ್ನು ಅವರು ಬರೆದಿದ್ದಾರೆ.

ಅವರು ನ್ಯೂಕ್ಲಿಯರ್ ವ್ರ್ಯಾಪ್-ಅಪ್ ವರದಿಯ ಸಹ-ಲೇಖಕರಾಗಿದ್ದಾರೆ, ಇದನ್ನು ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ ಲೈಬ್ರರಿಯ ವಿದೇಶಿ ಡಿಜಿಟಲ್ ಬರಹಗಳ ಸಂಗ್ರಹದಲ್ಲಿ ಸೇರಿಸಲು ಆಯ್ಕೆ ಮಾಡಿದೆ.

-ಡಿಫೆನ್ಸ್ ಆ್ಯಂಡ್ ಡಿಪ್ಲೊಮ್ಯಾಸಿ ಜರ್ನಲ್ ಮತ್ತು ಏರ್ ಪವರ್ ಜರ್ನಲ್ ಸೇರಿದಂತೆ ಹಲವಾರು ಶೈಕ್ಷಣಿಕ ನಿಯತಕಾಲಿಕಗಳಲ್ಲಿ ವಿದೇಶಿ ನೀತಿಗಳ ಕುರಿತು ಅವರ ಹಲವಾರು ಶೈಕ್ಷಣಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತಾದ ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ನೀತಿ ಶಿಫಾರಸುಗಳನ್ನು ಕೂಡಾ ಅವರು ರಚಿಸಿದ್ದಾರೆಂದು ಪ್ರಕಟನೆ ತಿಳಿಸಿದೆ.


share
ವಾರ್ತಾಭಾರತಿ
ವಾರ್ತಾಭಾರತಿ
Next Story
X