Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ...

ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಸಮಾವೇಶ ಸಮಾಪ್ತಿ

ವಾರ್ತಾಭಾರತಿವಾರ್ತಾಭಾರತಿ18 Jan 2025 9:44 PM IST
share
ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಸಮಾವೇಶ ಸಮಾಪ್ತಿ

ಮಂಗಳೂರು: ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಮಟ್ಟದ ಸಮಾವೇಶವು ಜ.17ಮತ್ತು 18ರಂದು ಯಶಸ್ವಿಯಾಗಿ ನಡೆಯಿತು. ಮಂಜನಾಡಿ ಅಲ್‌ಮದೀನಾ ವಿದ್ಯಾ ಸಂಸ್ಥೆಯ ವಠಾರದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ ಸಭಾಂಗಣದಲ್ಲಿ ಕರ್ನಾಟಕದ ಸಾವಿರಾರು ಉಲಮಾಗಳು ಭಾಗವಹಿಸಿದರು.

ಜ.17ರಂದು ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಮಕ್ಬರ ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಕ್ಬರ ಝಿಯಾರತ್‌ನೊಂದಿಗೆ ಪ್ರಾರಂಭವಾಯಿತು. ಬಳಿಕ ಜಂಇಯ್ಯತುಲ್ ಉಲಮಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಕೆಸಿರೋಡು ಸಮಾವೇಶ ಉದ್ಘಾಟಿಸಿದರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಗೈದರು. ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ ಫಿಕ್ಹ್ ಹಾಗೂ ಎಸ್‌ಪಿ ಹಂಝ ಸಖಾಫಿ ಬಂಟ್ವಾಳ ಇಸ್ಲಾಮಿನ ಇತಿಹಾಸ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಜ.18ರಂದು ಸುಬಹಿ ನಮಾಝ್ ಬಳಿಕ ಮೌಲಾನಾ ಯುಕೆ ಮುಹಮ್ಮದ್ ಸಅದಿ ʼಉಲಮಾಗಳು ಹೀಗಿರಬೇಕುʼ ಎಂಬ ವಿಷಯದಲ್ಲಿ, ಇಬ್ರಾಹಿಂ ಸಖಾಫಿ ಪುಝಕಾಟಿರಿ ʼನಾಸ್ತಿಕತೆಯ ಮೌಢ್ಯತೆʼ ಎಂಬ ವಿಷಯದಲ್ಲಿ, ಮುಹ್ಯಿದ್ದೀನ್ ಸಖಾಫಿ ತೋಕೆ ʼಅಶ್- ಅರೀಗಳು ಮತ್ತು ಮಾತುರೀದಿಗಳುʼ ಎಂಬ ವಿಷಯದಲ್ಲಿ, ಶಾಫಿ ಸಖಾಫಿ ಮುಂಡಂಬ್ರ ʼದಅವತಿನ ಹೊಸ ಆಯಾಮಾಗಳುʼ ಎಂಬ ವಿಷಯದಲ್ಲಿ ವಿಷಯ ಮಂಡಿಸಿದರು.

ಅಪರಾಹ್ನ ನಡೆದ ಸಮರೋಪ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷ ಸಯ್ಯಿದ್ ಕೆಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.

ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಳ್ ಮುಖ್ಯ ಭಾಷಣಗೈದರು. ಸಯ್ಯಿದ್ ಎಪಿಎಸ್ ತಂಳ್ ಉಪ್ಪಳ್ಳಿ, ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಳ್ ಕುಪ್ಪೆಟ್ಟಿ, ಕೆಪಿ ಹುಸೈನ್ ಸಅದಿ ಕೆಸಿರೋಡು, ಮುಹಮ್ಮದ್ ಸಅದಿ ವಳವೂರು, ಹೈದರ್ ಮದನಿ ಅಝ್ಹರಿಯ್ಯ, ಶಾದ್ಸುಲಿ ಫೈಝಿ ಕೊಡಗು, ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಖಾಸಿಂ ಮದನಿ ಕರಾಯ, ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಉಸ್ಮಾನ್ ಸಅದಿ ಪಟ್ಟೋರಿ, ತೋಕೆ ಮುಹ್ಯಿದ್ದೀನ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಇಸ್ಮಾಯಿಲ್ ಮದನಿ ಕುಂದಾಪುರ, ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಅಬ್ದುಲ್ ರಹಿಮಾನ್ ಮದನಿ ಮೂಳೂರು, ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಹಫೀಳ್ ಸಅದಿ ಕೊಡಗು, ಸುಫ್ಯಾನ್ ಸಖಾಫಿ ಭಾಗವಹಿಸಿದರು.

ರಾಜ್ಯ ಕಾರ್ಯದರ್ಶಿ ಡಿಕೆ ಉಮರ್ ಸಖಾಫಿ ಕಂಬಳಬೆಟ್ಟು ಸ್ವಾಗತಿಸಿದರು. ಕೆ. ಮುಹ್ಯಿದ್ದೀನ್ ಸಖಾಫಿ ವಂದಿಸಿದರು.

*ಸಮಾವೇಶದಲ್ಲಿ ಸಾಮಾಜಿಕ,ಧಾರ್ಮಿಕ, ಸಾಮುದಾಯಿಕ ವಿಷಯಗಳ ಬಗ್ಗೆ ಠರಾವು ಮಂಡಿಸಲಾಯಿತು.

1. ಸಂವಿಧಾನವು ಜಾರಿಗೊಂಡು 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವ ಜನವರಿ 26ನ್ನು ಸಂವಿಧಾನ ಸಂರಕ್ಷಣಾ ದಿನವಾಗಿ ಪರಿಗಣಿಸಿ ಸಂವಿಧಾನ ಸಂರಕ್ಷಣೆಗೆ ಪ್ರತಿಜ್ಞಾಬದ್ಧರಾಗಬೇಕು.

2.ಅಲ್ಪಸಂಖ್ಯಾತ ಸಮುದಾಯದ ಸುಧಾರಣೆಗಾಗಿ ಕೈಗೊಂಡಿದ್ದ ಅಲ್ಪಸಂಖ್ಯಾತ ಇಲಾಖೆಯ ಯಾವುದೇ ಯೋಜನೆಗಳಿಗೆ ಸರಕಾರವು ಕತ್ತರಿ ಪ್ರಯೋಗಿಸದೆ ಮುಂದುವರಿಸಬೇಕು. ಶಿಕ್ಷಣ ಸಾಲಗಳು ಸೇರಿದಂತೆ ಸರಕಾರದ ಯಾವುದೇ ವಿಧ ಸಾಲಯೋಜನೆಗಳನ್ನು ಬಡ್ಡಿ ರಹಿತಗೊಳಿಸಬೇಕು. ಸಾಗರೋತ್ತರ ಶಿಕ್ಷಣಕ್ಕಾಗಿ ಕೊಡುವ ಬಡ್ಡಿರಹಿತ ಸಾಲ ವ್ಯವಸ್ಥೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು. ಅದಕ್ಕೆ ನಿಗದಿಪಡಿಸಿದ ಅರ್ಹತಾ ಅಂಕವನ್ನು ಶೇ.60ರಿಂದ 50ಕ್ಕೆ ಇಳಿಸುವ ಮೂಲಕ ತಳಮಟ್ಟದ ವಿದ್ಯಾರ್ಥಿಗಳೂ ಸಾಗರೋತ್ತರ ಶಿಕ್ಷಣ ಪಡೆಯಲು ಅವಕಾಶ ಒದಗಿಸಬೇಕು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳನ್ನು ಯಾವ ಕಾರಣಕ್ಕೂ ತಡೆಹಿಡಿಯಬಾರದು.

3.ಕೇಂದ್ರ ಸರಕಾರವು ವಕ್ಫ್ ಮಂಡಳಿಗೆ ತಿದ್ದುಪಡಿ ಕಾಯ್ದೆಯನ್ನು ರೂಪಿಸಲು ಮುಂದಾಗಿರುವ ಪ್ರಯತ್ನವು ಅತ್ಯಂತ ಆಘಾತಕಾರಿಯಾಗಿದ್ದು, ಈ ಪ್ರಯತ್ನವನ್ನು ಕೈ ಬಿಟ್ಟು ಮುಸ್ಲಿಂ ಸಮುದಾಯದ ಆತಂಕಗಳನ್ನು ನಿವಾರಿಸಬೇಕು.

4. ಧಾರ್ಮಿಕ ಕೇಂದ್ರಗಳ ಬಗ್ಗೆ ವಿವಾದ ಹುಟ್ಟುಹಾಕಿ ಉತ್ಖನನ ನಡೆಸಿ ಸಮಾಜದ ಶಾಂತಿ ಕೆಡಿಸುವ ಹುನ್ನಾರಗಳನ್ನು ಕೊನೆಗೊಳಿಸ ಬೇಕು. ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಕೇಂದ್ರಗಳ ಬಗ್ಗೆ ಹಕ್ಕು ಮಂಡನೆ ನಡೆಸದೆ ಯಥಾಸ್ಥಿತಿ ಕಾಪಾಡಲು ಸರಕಾರ ಮುಂದಾಗಬೇಕು.

5.ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿಗಳ ಮರೆಯಲ್ಲಿ ಧಾರ್ಮಿಕ ನಿಯಮಗಳು ಮತ್ತು ಸಂಸ್ಕೃತಿಯನ್ನು ಉಲ್ಲಂಘಿಸುವ ಯಾವುದೇ ಕಾರ್ಯ ಚಟುವಟಿಕೆಗಳಿಂದ ಮುಸ್ಲಿಮರು ದೂರ ನಿಲ್ಲಬೇಕು.

6.ಇಸ್ಲಾಮಿನ ಪಾರಂಪರಿಕ ಆಚಾರ ವಿಚಾರಗಳಿಗೆ ವಿರುದ್ಧವಾದ ನೂತನವಾದಗಳು, ಅಧ್ಯಾತ್ಮದ ಹೆಸರಲ್ಲಿ ಮುಸ್ಲಿಮರ ದಾರಿ ತಪ್ಪಿಸುವ ನಕಲಿ ತರೀಕತ್ ವಾದಗಳು, ಯುವ ಜನತೆಯನ್ನು ದೇವ ವಿಶ್ವಾಸದಿಂದ ದೂರಗೊಳಿಸುವ ನಾಸ್ತಿಕವಾದ ಇತ್ಯಾದಿ ವಿತಂಡವಾದಗಳ ವಿರುದ್ಧ ಉಲಮಾಗಳು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು.

7.ಇಸ್ಲಾಂ ಬಹಳ ಪಾವಿತ್ರ್ಯವನ್ನು ನೀಡಿರುವ, ವ್ಯಕ್ತಿಗಳ ಜೀವನದಲ್ಲಿ ಅತ್ಯಂತ ಪ್ರಮುಖವಾಗಿರುವ ಮದುವೆಯು ಇಂದು ಹಲವು ಅನಾಚಾರಗಳ ಆಗರವಾಗಿ ಮಾರ್ಪಟ್ಟಿದೆ. ಸರಳ ವಿವಾಹಕ್ಕೆ ಸಮೃದ್ಧಿಯ ಭರವಸೆಯನ್ನು ನೀಡಿರುವ ಇಸ್ಲಾಮಿನ ಆದರ್ಶವನ್ನು ನಿರ್ಲಕ್ಷಿಸಿ ಮದುವೆಯ ದಿನ, ಅದರ ಮುಂಚಿನ ಮತ್ತು ನಂತರದ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನಿಟ್ಟು ಆರ್ಥಿಕ ಭಾರ ಹೆಚ್ಚಿಸುವುದು, ಅನ್ಯ ಸ್ತ್ರೀ ಪುರುಷ ಬೇಧವಿಲ್ಲದೆ ಬೆರೆತು ಮೈ ಮರೆಯುವುದು, ಅನಿಸ್ಲಾಮಿಕ ಆಚಾರಗಳನ್ನು ತುರುಕಿ ವಿವಾಹ ಸಂಸ್ಕೃತಿಯನ್ನು ವಿಕೃತಿಗೊಳಿಸುವುದು ಇತ್ಯಾದಿಗಳು ವ್ಯಾಪಕವಾಗುತ್ತಿದೆ. ಇದರ ವಿರುದ್ಧ ಉಲಮಾ ಉಮರಾಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಜಮಾಅತ್ ಸಮಿತಿಗಳು ಮತ್ತು ಧರ್ಮಗುರುಗಳು ಧರ್ಮಬದ್ಧ ಮದುವೆಗೆ ಪೂರಕವಾದ ನಿಯಮಗಳನ್ನು ರೂಪಿಸಿ ಮೊಹಲ್ಲಾಗಳಲ್ಲಿ ಅವುಗಳನ್ನು ಜಾರಿಗೊಳಿಸಬೇಕು.

8.ಗಾಂಜಾ, ಅಫೀಮು ಮತ್ತಿತರ ಮಾದಕ ದ್ರವ್ಯಗಳ ಸೇವನೆಯು ವಿದ್ಯಾರ್ಥಿ ಯುವಜನರಲ್ಲಿ ತೀವ್ರಗತಿಯಲ್ಲಿ ವ್ಯಾಪಿಸು ತ್ತಿದ್ದು, ಇದರ ವಿರುದ್ಧ ಮಕ್ಕಳು ಯುವಕರು ಮತ್ತು ಹೆತ್ತವರಲ್ಲಿ ಜಾಗೃತಿ ಮೂಡಿಸಬೇಕು. ಬಾಹ್ಯ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪುವ ಹೊಸ ತಲೆಮಾರಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಹಲ್ಲಾ ಮದ್ರಸಗಳನ್ನು ಆಧುನೀಕರಣಗೊಳಿ ಸಲು ಮೊಹಲ್ಲಾ ಕಮಿಟಿಗಳು ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು.

9. ಧರ್ಮವು ನೆಲೆ ನಿಂತಿರುವುದು ಧರ್ಮವನ್ನು ಕಲಿತ ಉಲಮಾಗಳಿಂದಲೇ ಎಂಬ ವಾಸ್ತವವನ್ನು ತಿಳಿದು ಸಾಮಾಜಿಕ ನಾಯಕರು ಮತ್ತು ಜನಸಾಮಾನ್ಯರು ಅವರಿಗೆ ಅರ್ಹ ಗೌರವ ಮತ್ತು ಧರ್ಮ ಬೋಧನೆಗೆ ಸೂಕ್ತ ವ್ಯವಸ್ಥೆಗಳನ್ನು ಒದಗಿ ಸಬೇಕು. ಉಲಮಾಗಳು ಸಮಾಜಕ್ಕೆ ಮಾದರಿಯಾಗಬೇಕಾದವರು ಎಂಬುದನ್ನು ಅರ್ಥಮಾಡಿಕೊಂಡು, ಕೆಟ್ಟ ನಡೆನುಡಿ ಗಳು ಮತ್ತು ಸಂಶಯಾಸ್ಪದ ಚಟುವಟಿಕೆಗಳಿಂದ ದೂರ ನಿಂತು ಪಾಪ ರಹಿತವಾದ ಮಾದರಿ ಜೀವನ ಸಾಗಿಸಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಬೇಕು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X