ಕಾಸರಗೋಡು : ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪೆರ್ಲ ಇವರ ಪ್ರಾಯೋಜಕತ್ವದಲ್ಲಿ ಜೂನ್ 28ರಂದು ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಿತು.
ಶಿಬಿರವನ್ನು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅರ್ಚಕ ಪ್ರಭಾಕರ ಕಾರಂತ ಹಾಗೂ ಉಡುವ ಶಂಕರನಾರಾಯಣ ಹೇರಳ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಶಿಬಿರದಲ್ಲಿ ವೈದ್ಯರಾದ ಡಾ. ಕೃಷ್ಣ ಮೋಹನ ಪೆರ್ಲ ಹಾಗೂ ಡಾ. ಸತ್ಯನಾರಾಯಣ ಅವರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ವೆಂಕಟೇಶ ಶೆಣೈ ಕುಂಬಳೆ, ವೆಂಕಟಕೃಷ್ಣ ಭಟ್, ಸತ್ಯನಾರಾಯಣ ಹೆಗಡೆ ಹಾಗೂ ಕಿಶೋರ್ ಹೇರಳ ಉಡುವ ಶಿಬಿರದಲ್ಲಿ ಸಹಕರಿಸಿದರು. ವಿವಿಧ ರೋಗಗಳ ತಪಾಸಣೆ ನಡೆಸಿ, ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ಶ್ರೀ ಗೋಪಾಲಕೃಷ್ಣ ಫಾರ್ಮಸಿ, ಕುಂಬಳೆ, ಡಾ. ರವಿ ನಾರಾಯಣ, ಸಂಜೀವಿನಿ ಕ್ಲಿನಿಕ್, ನೆಹರುನಗರ, ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್, ಸುಮತಿ ಕಾಂಪ್ಲೆಕ್ಸ್, ಕಬಕ ಹಾಗೂ ಸಿ. ಕೇಮ್. ಫಾರ್ಮಸಿ, ಬೆಂಗಳೂರು ಉಚಿತವಾಗಿ ಔಷಧಿ ವಿತರಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಸಹಕರಿಸಿದರು.
ಶಿಬಿರದಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಪ್ರಯೋಜನ ಪಡೆದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಸುಮಿತ್ರಾ ಮಯ್ಯ ಸಹಕರಿಸಿದರು.




