ಕಾಸರಗೋಡು: ಹಿಂದಕ್ಕೆ ಚಲಿಸಿ ಉರುಳಿ ಬಿದ್ದ ಜೀಪ್; ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು: ಇಳಿಜಾರು ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪ್ ಹಿಂದಕ್ಕೆ ಚಲಿಸಿ ಉರುಳಿ ಬಿದ್ದ ಪರಿಣಾಮ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೇಕೂರು ಸಮೀಪದ ಬೊಳ್ಳಾಯಿ ಎಂಬಲ್ಲಿ ನಡೆದಿದೆ.
ಜಯಂತಿ ಭಂಡಾರಿ (74) ಮತ್ತು ಪುತ್ರಿ ಸುಮಲತಾ ಶೆಟ್ಟಿ (47) ಗಾಯಗೊಂಡವರು. ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಳಿಜಾರು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸೊಸೈಟಿಯೊಂದಕ್ಕೆ ಸಂಬಂಧಿಸಿದ ಜೀಪ್, ಹಿಂದಕ್ಕೆ ಚಲಿಸಿ ಮನೆಯಂಗಳದಲ್ಲಿದ್ದ ತಾಯಿ ಮತ್ತು ಮಗಳಿಗೆ ಬಡಿದು ಸಮೀಪದ ತೋಟಕ್ಕೆ ಉರುಳಿದೆ ಎನ್ನಲಾಗಿದೆ.
ಘಟನೆ ನಡೆಯುವ ಸಂದರ್ಭದಲ್ಲಿ ಜೀಪಿನಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
Next Story





