ಮಂಜೇಶ್ವರ : ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಬೆಂಗಳೂರಿನಲ್ಲಿ ಪತ್ತೆ

ಮಂಜೇಶ್ವರ : ಕುಂಜತ್ತೂರಿನಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪತ್ತೆ ಹಚ್ಚಲಾಗಿದೆ.
ಕುಂಜತ್ತೂರು ಸ್ವಾಗತ್ ಹೋಟೆಲ್ ಸಮೀಪದ ನಿವಾಸಿಗಳಾದ ಇಬ್ರಾಹಿಂ ಅಶ್ರಫ್ ರವರ ಪುತ್ರ ಯಾಸೀನ್ (13) ಮತ್ತು ಅಮೀರ್ ರವರ ಪುತ್ರ ಸುಲ್ತಾನ್ (14) ನಾಪತ್ತೆಯಾಗಿದ್ದ ಬಾಲಕರು.
ಶನಿವಾರ ಸಂಜೆ 5 ಗಂಟೆ ಬಳಿಕ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಠಾಣೆಗೆ ಠಾಣೆಗೆ ದೂರು ಲಭಿಸಿತ್ತು . ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು , ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು .
ಮಂಗಳೂರು ರೈಲ್ವೆ ನಿಲ್ದಾಣದಿಂದ ಇಬ್ಬರು ಬಾಲಕರು ರೈಲು ಹತ್ತಿ ತೆರಳುತ್ತಿರುವ ದೃಶ್ಯ ಸಿ ಸಿ ಟಿವಿ ಕ್ಯಾಮರಾದಲ್ಲಿ ಕಂಡುಬಂದಿದ್ದು , ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಿಂದ ರೈಲ್ವೆ ಪೊಲೀಸರ ನೆರವಿನುಂಡ ಬಾಲಕರನ್ನು ವಶಕ್ಕೆ ಪಡೆದು ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು , ಬಾಲಕರಿಬ್ಬರನ್ನು ಕರೆ ತರಲು ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.




