ಮಂಜೇಶ್ವರ: ಜೀವನಶೈಲಿ ರೋಗನಿರ್ಣಯ ಶಿಬಿರ ಆಯೋಜನೆ

ಮಂಜೇಶ್ವರ: ಕುಂಬಳ ಕೋಸ್ಟಲ್ ಪೊಲೀಸ್ ಠಾಣೆ, ಕಾಸರಗೋಡು ಡಯಾ ಲೈಫ್ ಆಸ್ಪತ್ರೆ ಹಾಗೂ ಹೊಸಂಗಡಿ ಮಳ್ ಹರ್ ಕ್ಯಾಂಪಸ್‌ಗಳ ಸಂಯುಕ್ತ ಆಶ್ರಯದಲ್ಲಿ ಜೀವನಶೈಲಿ ರೋಗಗಳ ರೋಗನಿರ್ಣಯ ಶಿಬಿರವನ್ನು ಆಯೋಜಿಸಲಾಯಿತು.
ಮಳ್ ಹರ್ ಕ್ಯಾಂಪಸ್‌ನಲ್ಲಿ ನಡೆದ ಶಿಬಿರದ ಅಧ್ಯಕ್ಷತೆಯನ್ನು ಕುಂಬಳ ಕೋಸ್ಟಲ್ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಖಲೀಫಾ ಉದಿನೂರು ವಹಿಸಿದ್ದರು. ಕೋಸ್ಟಲ್ ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಶ್ ಕೆ. ಶಿಬಿರವನ್ನು ಉದ್ಘಾಟಿಸಿದರು.
ಡಯಾ ಲೈಫ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಮೊಯ್ದೀನ್ ಕುಂಞಿ ಐ.ಕೆ. ಅವರು ಜೀವನಶೈಲಿ ರೋಗಗಳ ಕುರಿತು ಜಾಗೃತಿ ಮೂಡಿಸಿದರು.
ಮಳ್ ಹರ್ ಅಧ್ಯಕ್ಷ ಸಯ್ಯಿದ್ ಅಬ್ದುರಹ್ಮಾನ್ ಶಹೀರ್ ಅಲ್ ಬುಖಾರಿ, ಡಯಾ ಲೈಫ್ ಜನರಲ್ ಮ್ಯಾನೇಜರ್ ಮನ್ಸೂರ್ ಹಾಗೂ ಮಳ್ ಹರ್ ಕ್ಯಾಂಪಸ್ ಪ್ರಿನ್ಸಿಪಾಲ್ ರೌಫ್ ಮಿಸ್ಬಾಹಿ ಅವರು ಶುಭ ಹಾರೈಸಿದರು.
ಮಳ್‌ಹರ್ ಮ್ಯಾನೇಜರ್ ಹಸನ್ ಕುಂಞಿ ವಂದಿಸಿದರು. ಶಿಬಿರದಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದರು.
Next Story




