ಬಂದ್ಯೋಡು | ಕೆಲಸದ ವೇಳೆ ಮನೆಯ ಮೇಲಂತಸ್ತಿನಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ಮನೆಯ ಮೇಲಂತಸ್ತಿನಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ರವಿವಾರ ಸಂಜೆ ಬಂದ್ಯೋಡು ಸಮೀಪದ ಚಿನ್ನಮೊಗರು ಎಂಬಲ್ಲಿ ನಡೆದಿದೆ.
ಜೋಡುಕಲ್ ನವೋದಯ ನಗರ ನಿವಾಸಿ ಜೆ.ಶಶಿಧರ (32) ಮೃತಪಟ್ಟವರು. ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದ ವೇಳೆ ಶಶಿಧರ ಮೇಲಂತಸ್ತಿನಿಂದ ಆಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದರೆನ್ನಲಾಗಿದೆ.
ಗಂಭೀರ ಗಾಯಗೊಂಡ ಶಶಿಧರರನ್ನು ತಕ್ಷಣ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಿಲ್ಲ. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





