Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕಾಸರಗೋಡು
  4. ಕನ್ನಡ, ಗಡಿನಾಡ ಕನ್ನಡ ರಕ್ಷಣೆ...

ಕನ್ನಡ, ಗಡಿನಾಡ ಕನ್ನಡ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ: ಸಾಹಿತಿ ಶೇಖರಗೌಡ ಪಾಟೀಲ

ಸಿರಿಬಾಗಿಲು ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ

ವಾರ್ತಾಭಾರತಿವಾರ್ತಾಭಾರತಿ4 Jan 2025 2:13 PM IST
share
ಕನ್ನಡ, ಗಡಿನಾಡ ಕನ್ನಡ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ:  ಸಾಹಿತಿ ಶೇಖರಗೌಡ ಪಾಟೀಲ

ಕಾಸರಗೋಡು: ಭಾಷೆಯ ಉಗಮವೇ ವಿಚಿತ್ರ ಹಾಗೂ ಸ್ವಾರಸ್ಯಕರವಾದುದು. ಮೊದಲು ಸಂಜ್ಞೆಯ ಮೂಲಕ ತೊಡಗಿದ ಸಂವಹನವು ಶಬ್ದವಾಗಿ ಬೆಳೆದು ಮತ್ತೆ ಭಾಷೆಯಾಗಿ ಪರಿವರ್ತಿತವಾಯಿತು. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿವೆ. ಇದರಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೇಷ್ಟವಾದದ್ದು. ಆದ್ದರಿಂದ ಅದನ್ನು ರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವೆಂದು ಹಾವೇರಿಯ ಹಿರಿಯ ಸಾಹಿತಿ, ಚಿಂತಕ ಶೇಖರಗೌಡ ಪಾಟೀಲ ಹೇಳಿದರು.

ಕೇರಳದ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾOಸ್ಕೃತಿಕ ಭವನದಲ್ಲಿ ಜರುಗಿದ ಪ್ರಥಮ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಯಕ್ಷಗಾನ ಶ್ರೇಷ್ಟವಾದ ಕಲೆ. ಅದನ್ನು ಬೆಳೆಸಿ, ಉಳಿಸುವುದರ ಜೊತೆಗೆ ಗಡಿನಾಡ ಕನ್ನಡ ರಕ್ಷಿಸಿ ಸಲು ಪ್ರತಿಯೊಬ್ಬ ಕನ್ನಡಿಗರು ಕಂಕಣಬದ್ದರಾಗಿ ನಿಲ್ಲಬೇಕು ಎಂದರು.

ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ಎಲ್ಲರು ಶ್ರಮಿಸಬೇಕು ಎಂದರು.

ಸಿರಿಬಾಗಿಲು ವೆಂಕಪ್ಪಯ್ಯ ಟ್ರಸ್ಟಿನ ಅಧ್ಯಕ್ಷರಾದ ರಾಮಕೃಷ್ಣಮಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ಸಂಸ್ಥೆಯ ವಾಸ್ತವಿಕ ವರದಿ, ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿ ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸಿದ್ದಾರೆ ಎಂದರು.

ಕಾಸರಗೋಡು ಕಸಾಪ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ್ ತೊಟ್ಟೆತ್ತೊಡಿ ಮಾತನಾಡಿ, ಕಾಸರಗೋಡಿನ ಪ್ರತಿಯೊಬ್ಬರ ರಕ್ತದ ಕಣ - ಕಣದಲ್ಲಿ ಕನ್ನಡ ಅಭಿಮಾನ ಉಕ್ಕಿ ಹರಿಯುತ್ತಿದೆ. ಚಿಕ್ಕ ಮಕ್ಕಳು ಹಾಗೂ ಈ ದೇಶದ ಸಂಪತ್ತಾದ ವಿದ್ಯಾರ್ಥಿ-ಯುವಕರಲ್ಲಿ ಯಕ್ಷಗಾನ ಬಯಲಾಟ, ಭಜನೆ, ತಾಳಮದ್ದಳೆ ಕಲೆ ಹಾಗೂ ಗಡಿ ನಾಡ ರಕ್ಷಿಸಿ ಉಳಿಸಿ ಬೆಳೆಸುವಲ್ಲಿ ಸಿರಿಬಾಗಿಲು ವೆಂಕಕಪ್ಪಯ್ಯ ಟ್ರಸ್ಟ್ ಹಾಗೂ ಎಲ್ಲ ಸಂಸ್ಥೆಗಳು ಶ್ರಮಿಸುತ್ತಿವೆ. ಅದರಲ್ಲೂ ದೂರದ ಹಾವೇರಿಯಿಂದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಬಳಗ ಕಾರ್ಯಕ್ರಮಕ್ಕೆ ಆಗಮಿಸಿದ್ದು ನಮಗೆಲ್ಲ ಹೆಚ್ಚು ಶಕ್ತಿ ತುಂಬುವುದರ ಜೊತೆಗೆ ಪ್ರೋತ್ಸಾಹ ಮತ್ತು ಸಂತಸ ತಂದಿದೆ. ಗಡಿನಾಡ ಕನ್ನಡ ಉಳಿವು ಮತ್ತು ಬೆಳವಣಿಗೆಗಾಗಿ ಈ ನಿಮ್ಮ ಆಗಮನ ನಿರಂತರವಾಗಿರಲಿ ಎಂದರು.

ಮುಖ್ಯ ಅತಿಥಿಗಳಾದ ಶ್ರೀಮತಿ ಗೋಪಿಕಾ ಸತೀಶ ಮಯ್ಯ,ಶ್ರೀ ನರಸಿಂಹ ಮೂರ್ತಿ, ಶ್ರೀ ಗೋಪಾಲ ಶೆಟ್ಟಿ ಅರಿಬೈಲು, ಶ್ರೀ ಶ್ರೀಧರ ಶೆಟ್ಟಿ, ಶ್ರೀ ಮುಖೇಶ್, ಡಾ. ಎಸ್. ಹನುಮಂತಪ್ಪ ಹಾಗೂ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಕನ್ನಡ ಸಂಸ್ಕೃತಿ ಮತ್ತು ಸಂಶೋಧನ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಅಪಾರ. ಈ ಮಣ್ಣಿನ ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ, ಡಾ. ಪಿ ವೆಂಕಟರಾಜು, ಬೇಕಲ ರಾಮನಾಯಕ ಮೊದಲಾದವರ ಸಾಹಿತ್ಯ ಸೃಷ್ಟಿ, ಸಂಶೋಧನ ದೃಷ್ಟಿ ಈ ಪ್ರದೇಶಕ್ಕೆ ಮಹತ್ವದ ಸ್ಥಾನ ಕಲ್ಪಿಸಿದೆ. ಅವರ ಜತೆಗೆ ಸೇರಬೇಕಾದ ಮತ್ತೊಂದು ಹೆಸರೆ ಸಿರಿಬಾಗಿಲು ವೆಂಕಪ್ಪಯ್ಯನವರದು. ಅವರು ಮೂಲತ ಶಿಶು ಸಾಹಿತಿಗಳು, ಮಕ್ಕಳಿಗೆ ಕಥೆ ಹೇಳುವುದರಲ್ಲಿ ಸಿದ್ದಹಸ್ತರು. ಆದ್ದರಿಂದ ಅವರ ಪುತ್ರ ರಾಮ ಕೃಷ್ಣ ಮಯ್ಯ ಅವರು ಭವ್ಯವಾದ ಸಂಸ್ಕೃತಿಕ ಭವನ, ಸುಂದರವಾದ ಯಕ್ಷಗಾನ ಮ್ಯೂಸಿಯಂ, ಮುಂತಾದ ಶಾಶ್ವತವಾದ ವಿಶೇಷ ಕಾರ್ಯಗಳನ್ನು ನಿರ್ಮಿಸಿ ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆಯಿಂದ, ಸಿರಿಬಾಗಿಲು ಮಯ್ಯ ಭಾಗವತರ ಪ್ರಯತ್ನ ದಿಂದ "ಕಾಸರಗೋಡಿನ ಸಿರಿಬಾಗಿಲು ಯಕ್ಷಗಾನದ ಸಿರಿಬಾಗಿಲೂ" ಆಗುತ್ತಿದ್ದು ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಬೇಕಾದ ಕೆಲಸಗಳಾಗಿ, ದಾಖಲಾಗುತ್ತಿವೆ ಎಂದರು.

ಬೆಂಗಳೂರಿನ ಮದುರ ಉಪಾಧ್ಯ, ಗುಜರಾತಿನ ಶ್ರೀ ಷಣಂಬೂರ್ ಶಂಕರನಾರಾಯಣ ಕಾರಂತ, ಲಕ್ಷ್ಮಣ ಕುಮಾರ ಮರಕಡ, ಮುಂತಾದ ಸಾಧಕರಿಗೆ ರಾಮಪ್ಪಮಯ್ಯ ದಂಪತಿಗಳಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಕೃಷ್ಣ ಕಾರಂತ, ಎಸ್ ಎನ್ ರಾಮಶೆಟ್ಟಿ, ಶೀನ ಶೆಟ್ಟಿ ಕಜೆ ಮುಂತಾದವರು ಉಪಸ್ಥಿತರಿದ್ದರು. ಮುಂಜಾನೆ ಮಕ್ಕಳಿಂದ ಯಕ್ಷಗಾನ, ಭಜನೆ, ಮುಂತಾದ ವಿಶೇಷ ಪ್ರದರ್ಶನಗಳು ಅದ್ದೂರಿಯಾಗಿ ಜರುಗಿದವು. ಎಲ್ಲ ಗಣ್ಯರನ್ನು ರಾಮಕೃಷ್ಣ ಮಯ್ಯ ದಂಪತಿಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಕಲಾಬಿಮಾನಿಗಳು, ಸಾಹಿತ್ಯ, ಶಿಕ್ಷಣ ಹಾಗೂ ಕನ್ನಡ ಅಭಿಮಾನಿಗಳು ಸಿಹಿ ಉಂಡು ಸಂಭ್ರಮಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X