ಕಾಞಂಗಾಡ್ : ಸೆ.19 ರಂದು ಹೊಸದುರ್ಗ ನಿತ್ಯಾನಂದಾಶ್ರಮದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಾಸರಗೋಡು: ಕಾಞಂಗಾಡ್ ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದಾಶ್ರಮದಲ್ಲಿ ಸೆ.19ರಂದು ಬೆಳಗ್ಗೆ ಶ್ರೀ ಅವಧೂತಾನಂದ ಸ್ವಾಮೀಜಿಯವರ ಜೀವನ, ಅನುಭವಗಳು ಹಾಗೂ ಕಾರ್ಯಗಳನ್ನು ಒಳಗೊಂಡ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಲಿದೆ.
ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೃತಿಯು ಬಿಡುಗಡೆಯಾಗಲಿದೆ. ಬೆಳಗ್ಗೆ 10.45ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನ, ವೇದಘೋಷ, ಪುಸ್ತಕ ಬಿಡುಗಡೆ ಹಾಗೂ ಸ್ವಾಮಿ ಅವಧೂತಾನಂದರ ಜೀವನ ಮತ್ತು ಕಾರ್ಯಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕಾಸರಗೋಡು ಸತ್ಯಸಾಯಿ ಭಕ್ತರಿಂದ ವೇದಪಠಣ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಶಿವಲಿಂಗಪ್ಪ ಸ್ವಾಮೀಜಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಅವಧೂತಾನಂದ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.
Next Story




