ಕಾಞಂಗಾಡ್ | ಸ್ನಾನದ ವೇಳೆ ಕೆರೆಪಾಲಾದ ಚಿನ್ನದ ಸರ: ಹುಡುಕಿ ಕೊಟ್ಟ ಅಗ್ನಿಶಾಮಕ ದಳ!

ಕಾಸರಗೋಡು: ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕೆರೆ ನೀರುಪಾಲಾಗಿದ್ದ ಚಿನ್ನದ ಸರವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಪತ್ತೆ ಹಚ್ಚಿ ವಾರಸುದಾರನಿಗೆ ಹಸ್ತಾಂತರಿಸಿದ ಘಟನೆ ಕಾಞಂಗಾಡ್ ನಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಕಾಞಂಗಾಡ್ ತೆರವಯತ್ ಅರಯಿಲ್ ಭಗವತಿ ಕ್ಷೇತ್ರದ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್ ನ ಚಿನ್ನದ ಸರ ಆಕಸ್ಮಿಕವಾಗಿ ಕಳಚಿಕೊಂಡು ಕೆರೆಪಾಲಾಗಿತ್ತು. ತುಂಬಾ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅದರಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಕೆರೆಯಲ್ಲಿ ಹುಡಕಾಡಿ ಕೆಸರಿನಲ್ಲಿ ಸಿಲುಕಿದ್ದ ಚಿನ್ನದ ಸರವನ್ನು ಪತ್ತೆ ಹಚ್ಚಿ ವಾರಸುದಾರನಿಗೆ ಹಸ್ತಾಂತರಿಸಿದರು.
Next Story





