ಕಾಸರಗೋಡು : ಶೌಚಾಲಯದ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು

ಕಾಸರಗೋಡು: ಶೌಚಾಲಯಕ್ಕೆ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಮಧೂರು ಮಂಜತ್ತಡ್ಕದಲ್ಲಿ ಶನಿವಾರ ಸಂಜೆ ನಡೆದಿದೆ.
ಮಂಜತ್ತಡ್ಕದ ಮುಹಮ್ಮದ್ ಸಾಜಿದ್ ರವರ ಪುತ್ರ ಮುಹಮ್ಮದ್ ಅಯಾನ್ ಮೃತ ಬಾಲಕ. ಆಟವಾಡುತ್ತಿದ್ದ ಬಾಲಕ ನಿರ್ಮಾಣ ಹಂತದ ಮನೆಯ ಶೌಚಾಲಯ ಗುಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಬಾಲಕ ನಾಪತ್ತೆಯಾಗಿದ್ದರಿಂದ ಮನೆಯವರು ಹುಡುಕಾಡಿದಾಗ ನೀರು ತುಂಬಿದ ಹೊಂಡಕ್ಕೆ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.
ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




