ಕಾಸರಗೋಡು: ಕಾಲೇಜು ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತ್ಯು

ರಾಹುಲ್
ಕಾಸರಗೋಡು: ಕಾಲೇಜು ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಪುಲಿಕಡವು ಎಂಬಲ್ಲಿ ನಡೆದಿದೆ.
ಪನತ್ತಡಿಯ ರಾಹುಲ್ (20) ಮೃತಪಟ್ಟವರು. ರಾಜಾಪುರ ಸೈಂಟ್ ಪಾಯಸ್ ಟೆಂತ್ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದರು.
ಶುಕ್ರವಾರ ಸಂಜೆ ಸಹಪಾಠಿಗಳ ಜೊತೆ ಪುಲಿಕಡವು ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ರಾಜಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story