ಕಾಸರಗೋಡು: ನೆಲ್ಲಿಕುಂಜೆ ಲೈಟ್ ಹೌಸ್ ತೀರದಲ್ಲಿ ಮೃತದೇಹ ಪತ್ತೆ

ಕಾಸರಗೋಡು: ನೆಲ್ಲಿಕುಂಜೆ ಲೈಟ್ ಹೌಸ್ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿದ್ದು, ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಬೆಳಿಗ್ಗೆ ಬೆಸ್ತರು ಗಮನಿಸಿ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದು ,ಪೊಲೀಸರು ಸ್ಥಳಕ್ಕಾಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಮೃತದೇಹದ ರುಂಡ ಬೇರ್ಪಟ್ಟ ಹಿನ್ನಲೆಯಲ್ಲಿ ಇದು ಕೊಲೆಯಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Next Story




