ಕಾಸರಗೋಡು : ಡಿಗ್ರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಾಸರಗೋಡು: ಡಿಗ್ರಿ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀಪುಗುರಿ ಎಂಬಲ್ಲಿ ಗುರುವಾರ ನಡೆದಿದೆ.
ಮೀಪುಗುರಿ ಶೆಟ್ಟಿಗದ್ದೆಯ ಗಿರೀಶ್-ದೀಪಿಕಾ ದಂಪತಿ ಪುತ್ರಿ ಪೃಥ್ವಿಕಾ (17) ಆತ್ಮಹತ್ಯೆ ಮಾಡಿಕೊಂಡವರು.
ಮಧ್ಯಾಹ್ನ ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಮನೆಯವರು ಆಸ್ಪತ್ರೆಗೆ ತಲುಪಿದರೂ ಜೀವ ಉಳಿಸಲಾಗಲಿಲ್ಲ. ಪ್ಲಸ್ ಟು ತೇರ್ಗಡೆಯಾದ ಬಳಿಕ ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿದ್ದಳು. ಗುರುವಾರ ಮಧ್ಯಾಹ್ನ ಯಾರೂ ಇಲ್ಲದ ಸಂದರ್ಭದಲ್ಲಿ ಈಕೆ ಕೃತ್ಯ ನಡೆಸಿದ್ದಾಳೆ.
ಕಾಸರಗೋಡು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story




