ಕಾಸರಗೋಡು: ಚಾಲಕನ ನಿರ್ಲಕ್ಷ್ಯ ಆರೋಪ; ಡಿವೈಡರ್ ಏರಿದ ಕೆಎಸ್ಸಾರ್ಟಿಸಿ ಬಸ್

ಕಾಸರಗೋಡು: ಕೆ ಎಸ್ ಆರ್ ಟಿ ಸಿ ಬಸ್ಸೊಂದು ರಸ್ತೆಯ ತಡೆ ಗೋಡೆಯ ಮೇಲೆ ರಿದ ಘಟನೆ ಕುಂಬಳೆಯ ಶನಿವಾರ ಸಂಜೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಪ್ರವೇಶಿಸುವಾಗ ಈ ಘಟನೆ ನಡೆದಿದೆ. ಶನಿವಾರ ಅಪರಾಹ್ನ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ ಕುಂಬಳೆ ಪೇಟೆಯ ಸರ್ವೀಸ್ ರಸ್ತೆಗೆ ಪ್ರವೇಶಿಸುವ ಸಂದ ರ್ಭದಲ್ಲಿ ಚಾಲಕನ ನಿಯಂತ್ರಣ ಮೀರಿ ಗೋಡೆಗೆ ಹತ್ತಿಕೊಂಡಿದೆ.
ಸುಮಾರು 50ರಷ್ಟು ಪ್ರಯಾಣಿಕರಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆಅಪಾಯದಿಂದ ಪಾರಾಗಿದ್ದಾರೆ. ಇವರಿಗೆ ಕುಂಬಳೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು.
ಹೆದ್ದಾರಿಯಿಂದ ಎಡಕ್ಕೆ ಸರ್ವೀಸ್ ರಸ್ತೆಗೆ ಬರಬೇಕಿದ್ದ ಬಸ್ ಅನಿರೀಕ್ಷಿತ ತಡೆಗೋಡೆಯನ್ನೇರಿ ನಿಂತುಕೊಂಡಿದೆ. ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ
Next Story





