Kasargod | ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತ್ಯು

ಕಾಸರಗೋಡು : ಕೆಲಸ ನಿರ್ವಹಿಸುತ್ತಿದ್ದ ವಿದ್ಯುತ್ ಶಾಕ್ ತಗುಲಿ ಕೆ.ಎಸ್.ಇ.ಬಿ ಲೈನ್ಮ್ಯಾನ್ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಮಡಿಕೈನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಪುಲ್ಲೂರು ಮಧುರಂಬಾಡಿ ನಿವಾಸಿ ಭರತನ್ (52) ಎಂದು ಗುರುತಿಸಲಾಗಿದೆ. ಇವರು ಕೆ.ಎಸ್.ಇ.ಬಿ ಮಾವುಂಗಾಲ್ ಸೆಕ್ಷನ್ ನ ಉದ್ಯೋಗಿಯಾಗಿದ್ದರು.
ಮಡಿಕೈ ಕಣಿಚ್ಚಿರ ಪಾಲಂ (ಸೇತುವೆ) ಸಮೀಪದ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ.
ಕಣಿಚ್ಚಿರ ಭಾಗದಲ್ಲಿ ವಿದ್ಯುತ್ ಲೈನ್ ನಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲು ಭರತನ್ ಕಂಬ ಏರಿದ್ದಾಗ ಅನಿರೀಕ್ಷಿತವಾಗಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದರೆನ್ನಲಾಗಿದೆ. ಸೊಂಟಕ್ಕೆ ಸುರಕ್ಷತ ಬೆಲ್ಟ್ ಧರಿಸಿದ್ದರಿಂದ, ಶಾಕ್ ತಗುಲಿದ ಬಳಿಕ ಅವರ ಮೃತದೇಹ ಕಂಬದಲ್ಲೇ ಸಿಲುಕಿಕೊಂಡಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಕೆಳಗಿಳಿಸಿದರು.
Next Story




