ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ; ಶೇ.50.1 ಮತದಾನ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1.15 ರ ತನಕ 50.1 ಶೇಕಡಾ ಮತದಾನವಾಗಿದೆ. ಮತದಾನ ಶಾಂತಿಯುತವಾಗಿದೆ.
11,12,190 ಮಂದಿಯಲ್ಲಿ 5,56,255 ಮಂದಿ ಮತ ಚಲಾಯಿಸಿದ್ದಾರೆ.
ನಗರಸಭೆಯಲ್ಲಿ ಕಾಞಂಗಾಡ್ 44.98,ಕಾಸರಗೋಡು 43.58 ಮತ್ತು ನೀಲೇಶ್ವರ 54.23 ಶೇಕಡಾ ಮತದಾನವಾಗಿದೆ.
ಬ್ಲಾಕ್ ಪಂಚಾಯತ್ ನ ನೀಲೇಶ್ವರ 55.71, ಕಾಞಂಗಾಡ್ 51.42, ಪರಪ್ಪ 51.64, ಕಾಸರಗೋಡು 46.85, ಕಾರಡ್ಕ 52.55 ಮತ್ತು ಮಂಜೇಶ್ವರ 46.31 ಶೇಕಡಾ ಮಂದಿ ಹಕ್ಕು ಚಲಾಯಿಸಿದ್ದಾರೆ.
Next Story





