ಕಾಸರಗೋಡು ಸ್ಥಳೀಯಾಡಳಿತ ಚುನಾವಣೆ : ಶೇ.73.28ರಷ್ಟು ಮತದಾನ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಂಜೆ 6 ಗಂಟೆ ತನಕ 73.28ಶೇಕಡಾ ಮತದಾನವಾಗಿದೆ.
ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಬೇಕಿದ್ದರೂ ಮತದಾನ ವಿಳಂಬವಾಗಿ ಸಾಗುತ್ತಿದೆ .ಕೆಲ ಮತಗಟ್ಟೆಗಳಲ್ಲಿ 6 ಗಂಟೆ ನಂತರವೂ ಸರದಿ ಸಾಲು ಕಂಡುಬಂದಿದೆ.
11,12,190 ಮಂದಿಯಲ್ಲಿ 8,14,997 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ದೇಲಂಪಾಡಿ ಹಾಗೂ ಕಾಞಂಗಾಡ್ ನಲ್ಲಿ ಕೆಲ ಘಟನೆ ಬಿಟ್ಟರೆ ಮತದಾನ ಶಾಂತಿಯುತವಾಗಿತ್ತು. ನಕಲಿ ಮತದಾನದ ಬಗ್ಗೆ ಅಲ್ಲಲ್ಲಿ ವರದಿಗಳು ಬಂದಿವೆ. ಜಿಲ್ಲಾ, ಬ್ಲಾಕ್ , ಗ್ರಾಮ ಪಂಚಾಯತ್ ಹಾಗೂ ಮೂರು ನಗರಸಭೆ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತದಾನ ನಡೆದಿದೆ.
ಡಿ.13 ರಂದು ಫಲಿತಾಂಶ ಹೊರಬೀಳಲಿದೆ.
Next Story





