ಕಾಸರಗೋಡು: ಮಾತನಾಡುತ್ತಿದ್ದಾಗ ಸ್ಫೋಟಗೊಂಡ ಮೊಬೈಲ್ ಫೋನ್ !
![ಕಾಸರಗೋಡು: ಮಾತನಾಡುತ್ತಿದ್ದಾಗ ಸ್ಫೋಟಗೊಂಡ ಮೊಬೈಲ್ ಫೋನ್ ! ಕಾಸರಗೋಡು: ಮಾತನಾಡುತ್ತಿದ್ದಾಗ ಸ್ಫೋಟಗೊಂಡ ಮೊಬೈಲ್ ಫೋನ್ !](https://www.varthabharati.in/h-upload/2023/08/08/1178331-phone.webp)
ಕಾಸರಗೋಡು : ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡು ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಪರಪ್ಪ ಬಳಿ ಮಂಗಳವಾರ ನಡೆದಿದೆ.
ಪಳ್ಳತುಮೂಲೆಯ ರವೀಂದ್ರನ್ ಗಾಯಗೊಂಡವರು ಎಂದು ತಿಳಿದುಬಂದಿದೆ
ಇಂದು ಬೆಳಗ್ಗೆ ಮನೆಯಲ್ಲಿ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡಿದೆ. ಇದರಿಂದ ಅವರ ಬಲಕೈಗೆ ಗಾಯಗಳಾಗಿವೆ. ಕರೆ ಬಂದಾಗ ರಿಸೀವ್ ಮಾಡಿದ್ದು, ಈ ಸಂದರ್ಭ ಮೊಬೈಲ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಗಾಬರಿಗೊಂಡು ಎಸೆಯುತ್ತಿದ್ದಂತೆ ಸ್ಫೋಟಗೊಂಡಿದೆ. ವಿದೇಶದಿಂದ ಸಂಬಂಧಿಕರೋರ್ವರು ಈ ಮೊಬೈಲ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
Next Story