ಕಾಸರಗೋಡು: ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಓರ್ವನ ಬಂಧನ

ಕಾಸರಗೋಡು: ಕಾಸರಗೋಡು ರೈಲ್ವೆ ನಿಲ್ದಾಣದ ಡಾರ್ಮಿಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರೈಲ್ವೆ ಪಾರ್ಸೆಲ್ ಕಚೇರಿಯಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪೆರಿಯ ಸಮೀಪದ ಚೆರುಕ್ಕಪ್ಪಾರ, ರಾರಪ್ಪನಡುಕ್ಕಂ ನಿವಾಸಿ ಇಸ್ಮಾಯಿಲ್ ಕೆ. (47) ಬಂಧಿತ ಆರೋಪಿ.
ಅಕ್ಟೋಬರ್ 27ರಂದು ಡಾರ್ಮಿಟರಿಯ ಸ್ವಾಗತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಕೊಠಡಿಗೆ ಆರೋಪಿ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕವಾಗಿ ಕಿರುಕುಳ ಕ್ಕೆ ಯತ್ನಿಸಿರುವುದಾಗಿ ಯುವತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಕೆ. ರಾಜೀವನ್ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಕಾಞಂಗಾಡ್ನ ಎರಡನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Next Story




