ಕಾಸರಗೋಡು: ಪಳ್ಳತ್ತಡ್ಕ ಪರಮೇಶ್ವರ ಭಟ್ ನಿಧನ
ಬದಿಯಡ್ಕ: ಹಿರಿಯ ಧಾರ್ಮಿಕ ಮುಂದಾಳು ಪಳ್ಳತ್ತಡ್ಕ ಪರಮೇಶ್ವರ ಭಟ್(85) ನಿಧನರಾದರು. ಅವರು ಉಡುಪಿಯಲ್ಲಿರುವ ಪುತ್ರ ಸುಬ್ರಹ್ಮಣ್ಯ ಅವರ ಮನೆಯಲ್ಲಿ ಆದಿತ್ಯವಾರ ಸಂಜೆ ಕೊನೆಯುಸಿರೆಳೆದರು. ವೈದಿಕರಾಗಿದ್ದ ಅವರು 60 ಕ್ಕೂ ಹೆಚ್ಚು ಕಾಲ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದು ಹಲವು ಧಾರ್ಮಿಕ ಕೇಂದ್ರಗಳಲ್ಲಿ ದೇವತಾ ಪ್ರತಿಷ್ಠೆಗೆ ನೇತೃತ್ವ ವಹಿಸಿದ್ದರು. ಪಳ್ಳತ್ತಡ್ಕ ಅಯ್ಯಪ್ಪ ಸೇವಾ ಸಮಿತಿಯು ರಕ್ಷಾಧಿಕಾರಿಯಾಗಿದ್ದರು.
ಮೃತರು ಪತ್ನಿ ಜಾಹ್ನವಿ, ಮಕ್ಕಳಾದ ಸುಬ್ರಹ್ಮಣ್ಯ ಭಟ್, ಶಿವಶಂಕರ ಭಟ್, ಶಶಿಧರ ಭಟ್, ಅಳಿಯ ಮುರಳೀಧರ, ಸೊಸೆಯಂದಿರಾದ ಸ್ವರ್ಣ ಗೌರಿ, ಈಶ್ವರಿ, ಭಾರ್ಗವಿ, ಸಹೋದರ-ಸಹೋದರಿಯರಾದ ವಿಶ್ವೇಶ್ವರ ಭಟ್, ಕೃಷ್ಣ ಭಟ್, ಶಂಕರ ನಾರಾಯಣ ಭಟ್, ಸದಾಶಿವ ಭಟ್, ಗಣಪತಿ ಭಟ್, ಸುಬ್ರಹ್ಮಣ್ಯ ಭಟ್, ಶಂಕರಿ, ಜಯಂತಿ, ಪ್ರಸನ್ನ ಕುಮಾರಿ, ವಿಜಯಲಕ್ಷ್ಮಿ, ಶಾರದ, ದೇವಕಿ, ಸೀತಾ ಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story