ಕಾಸರಗೋಡು: ಸ್ಕೂಟರ್-ಬೈಕ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರಿಗೆ ಗಾಯ

ಶಹಬಾಸ್ ಹಸನ್
ಕಾಸರಗೋಡು: ಸ್ಕೂಟರ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಸೋಮವಾರ ರಾತ್ರಿ ಉಳಿಯ ತ್ತಡ್ಕ - ಚೌಕಿ ರಸ್ತೆಯ ಆಝಾದ್ ನಗರದಲ್ಲಿ ನಡೆದಿದೆ.
ಸ್ಕೂಟರ್ ಸವಾರ ಆಝಾದ್ ನಗರದ ಶಹಬಾಸ್ ಹಸನ್ ( 17) ಮೃತಪಟ್ಟವರು . ಜೊತೆಗಿದ್ದ ಇನ್ನೋರ್ವ ಸವಾರ ಹಾಗೂ ಬೈಕ್ ನಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದು,ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಸನ್ ಉದಯ ಗಿರಿಯಲ್ಲಿರುವ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿರಿಸಲಾಗಿದೆ.
Next Story




