ಕಾಸರಗೋಡು : ಕೆರೆಯಲ್ಲಿ ಮುಳುಗಿ ಮಹಿಳೆ ಮೃತ್ಯು

ಕಾಸರಗೋಡು : ಕೆರೆಯಲ್ಲಿ ಮುಳುಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ನಡೆದಿದೆ.
ಸೀತಾಂಗೋಳಿ ಸಮೀಪದ ನಿವಾಸಿ ರಾಮಕೃಷ್ಣ ಎಂಬವರ ಪತ್ನಿ ಸುನಿತಾ ( 48) ಮೃತಪಟ್ಟವರು. ಬುಧವಾರ ರಾತ್ರಿ ಮಲಗಿದ್ದ ಸುನಿತಾ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದು, ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಬಳಿಕ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿತ್ತು
ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಗುರುವಾರ ಸಂಜೆ ಮುಜುಂಗಾವು ದೇವಸ್ಥಾನದ ಸಮೀಪದ ಕರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೇರಿದರು. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




