ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು
![ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು](https://www.varthabharati.in/h-upload/2023/07/28/1174004-ksd.webp)
ಕಾಸರಗೋಡು: ಆವರಣ ಇಲ್ಲದ ಬಾವಿಗೆ ಬಿದ್ದು ಪಾಕ ತಜ್ಞರೋರ್ವರು ಮೃತಪಟ್ಟ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ಗುರುವಾರ ನಡೆದಿದೆ.
ಮೃತರ ಪಟ್ಟವರೆಂದು ಜನಾರ್ಧನ ನಾಯಕ್ (42) ಗುರುತಿಸಲಾಗಿದೆ. ಮನೆ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ನೀರು ಸೇದಲು ಹೋಗಿದ್ದ ಸಂದರ್ಭ ದಲ್ಲಿ ಕಾಲು ಜಾರಿ ಆಕಸ್ಮಿಕ ವಾಗಿ ಬಿದ್ದಿರ ಬಹುದೆಂದು ಶಂಕಿಸಲಾಗಿದೆ .
ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು , ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದರು. ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ. ಪರಿಸರವಾಸಿಗಳು ಮತ್ತು ಮುಳುಗು ತಜ್ಞರ ಸಹಾಯ ದಿಂದ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು.ಬದಿಯಡ್ಕ ಪೊಲೀಸರು ಮಹಜರು ನಡೆಸಿ ದರು ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು.
Next Story