ಕಾಸರಗೋಡು | ವೃದ್ಧನನ್ನು ಕೊಲೆಗೈದ ನೆರೆಮನೆಯ ನಿವಾಸಿ

ಕಾಸರಗೋಡು: ವೃದ್ಧರೋರ್ವರನ್ನು ನೆರೆಮನೆಯ ನಿವಾಸಿ ತಲೆಗೆ ಹೊಡೆದು ಕೊಲೆಗೈದ ಘಟನೆ ರವಿವಾರ ರಾತ್ರಿ ಕರಿಂದಳ ಎಂಬಲ್ಲಿ ನಡೆದಿದೆ.
ಕಂಬಳಪಳ್ಳಿ ಚಿತ್ರಮೂಲೆ ನಿವಾಸಿ ಕಣ್ಣನ್(80) ಕೊಲೆಯಾದವರು.
ಮನೆ ಸಮೀಪದ ಶ್ರೀಧರ (45) ಕೊಲೆ ಆರೋಪಿಯಾಗಿದ್ದು, ಮರದ ತುಂಡಿನಿಂದ ತಲೆಗೆ ಬಡಿದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಕಾರಣ ಏನೆಂಬುದು ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ನೀಲೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





