ಕುಂಬಳೆ : ಬೆಂಕಿ ಆಕಸ್ಮಿಕ; ಹಾರ್ಡ್ವೇರ್ ಗೋದಾಮು ಅಗ್ನಿಗಾಹುತಿ

ಕಾಸರಗೋಡು: ಹಾರ್ಡ್ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿ ಮುಖಾರಿಗದ್ದೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬದಿಯಡ್ಕ ನಿವಾಸಿ ಹರ್ಷಾದ್ ಎಂಬವರ ಮಾಲಕತ್ವದ ಅರ್ಶ್ ಎಂಟರ್ ಪ್ರೈಸಸ್ ನ ಗೋದಾಮಿನಲ್ಲಿ ಈ ದುರಂತ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ.
ಘಟನೆಯಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು, ಕಾಸರಗೋಡು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
Next Story