ಕುಂಬಳೆ: ಮೀನುಗಾರಿಕಾ ಬೋಟ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಪ್ರಕರಣ ದಾಖಲು

ಕಾಸರಗೋಡು: ಮೀನುಗಾರಿಕಾ ಬೋಟ್ ಮತ್ತು ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ ಬೆಳಿಗ್ಗೆ ಕುಂಬಳೆ ಸಮೀಪದ ಮುಟ್ಟಂ ಎಂಬಲ್ಲಿ ಬೆಳಕಿಗೆ ಬಂದಿದೆ.
ಕೀರ್ತೆಶ್ ದಾಮೋದರನ್ ಅವರ ಮಾಲಕತ್ವದ ಬೋಟ್, ಇಂಜಿನ್, ಬಲೆ ಮೊದಲಾದವುಗಳನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಮುಂಜಾನೆ ಮೀನುಗಾರಿಕೆಗೆ ತೆರಳಿ ಮರಳಿದವರು ಇದನ್ನು ಗಮನಿಸಿ ಮಾಲಕರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
Next Story