ಕುಂಬಳೆ: ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು; ಕೊಲೆ ಆರೋಪಿ ಸೆರೆ

ಆರೋಪಿ ಶ್ರೀನಿವಾಸ |ಮೃತ ಸಫಾಯಿದ್
ಕಾಸರಗೋಡು: ಕುಂಬಳೆ ಸೀತಾಂಗೋಳಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆತನನ್ನು ತಲೆಗೆ ಬಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಕೋಟೆಕ್ಕಾರಿನ ಶ್ರೀನಿವಾಸ (39) ಬಂಧಿತ ಆರೋಪಿ. ಮುಂಡಿತ್ತಡ್ಕ ಬಾಪಲಿಪೋನ ಪಾಡ್ಲಡ್ಕದ ಸಫಾಯಿದ್ (30) ಕೊಲೆಯಾದವರು. ಸೀತಾಂಗೋಳಿ ಪೇಟೆ ಸಮೀಪದ ನಿರ್ಜನ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿತ್ತು.
ಪೂರ್ವ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮರದ ತುಂಡನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.
Next Story




