ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಕಾಸರಗೋಡು ನಗರಸಭೆ ಯುಡಿಎಫ್ ತೆಕ್ಕೆಗೆ

ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ನಗರಸಭೆಯಲ್ಲಿ ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆ ಆಗಿದ್ದು, 39 ವಾರ್ಡ್ ಗಳಲ್ಲಿ ಯುಡಿಎಫ್ 24ರಲ್ಲಿ ಗೆಲುವು ಸಾಧಿಸಿದ್ದರೆ, ಎನ್.ಡಿ.ಎ. 12ರಲ್ಲಿ ಜಯ ಗಳಿಸಿದೆ. ಎಲ್ ಡಿ ಎಫ್. ಒಂದು ವಾರ್ಡ್ ನಲ್ಲಿ ಜಯಿಸಿದೆ. ಪಕ್ಷೇತರರು ಎರಡು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಞಂಗಾಡ್ ಮತ್ತು ನೀಲೇಶ್ವರ ನಗರಸಭೆಯಲ್ಲಿ ಎಲ್.ಡಿ.ಎಫ್. ಮುನ್ನಡೆ ಕಾಯ್ದುಕೊಂಡಿದೆ.
ಮತ ಎಣಿಕೆ ಮುಂದುವರಿದಿದೆ.
Next Story





