ಕಾಸರಗೋಡು| ತೆಂಗಿನ ಮರಕ್ಕೆ ಹತ್ತಿ, ಯಂತ್ರ ದೋಷದಿಂದ ಮರದಲ್ಲಿ ಸಿಲುಕಿದ ವ್ಯಕ್ತಿ

ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ
ಕಾಸರಗೋಡು: ಯಂತ್ರದ ಮೂಲಕ ತೆಂಗಿನ ಕಾಯಿ ಕೀಳಲು ಮರ ಹತ್ತಿದ ವ್ಯಕ್ತಿಯೊಬ್ಬರು ಯಂತ್ರ ದೋಷದಿಂದ ಮರದಲ್ಲಿ ಸಿಲುಕಿದ ಘಟನೆ ಉದುಮದಲ್ಲಿ ನಡೆದಿದ್ದು, ಬಳಿಕ ಅವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ.
60 ರ ಹರೆಯದ ರಾಜು ಎಂಬವರು ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಮರದಿಂದ ಕೆಳಗಿಳಿಯಲಾಗದೆ ಸಿಲುಕಿಕೊಂಡಿದ್ದರು. ಬಳಿಕ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಜು ಅವರನ್ನು ಮರದಿಂದ ಕೆಳಗೆ ಇಳಿಸಿದರು.
Next Story





