ಮಂಜೇಶ್ವರ: ಮದ್ರಸಕ್ಕೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿನಾಯಿ ದಾಳಿ

ಮಂಜೇಶ್ವರ: ಮದ್ರಸಕ್ಕೆ ತೆರಳುತ್ತಿದ್ದ ಎಂಟು ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.
ಮಂಜೇಶ್ವರದ ರಶೀದ್ ಎಂಬವರ ಪುತ್ರ ಅಬೂಬಕರ್ ರಫಾನ್ ಗಾಯಗೊಂಡ ಬಾಲಕ.
ಈತ ಬೆಳಗ್ಗೆ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಯಿಯೊಂದು ಅಟ್ಟಾಡಿಸಿ ಕಚ್ಚಿ ಗಾಯಗೊಳಿಸಿದೆ.
ಬಾಲಕನ ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.
ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





