Manjeshwar | ಕಡವು ಮಖಾಂನ ಕಾಣಿಕೆ ಡಬ್ಬಿಯಿಂದ ಕಳವು

ಮಂಜೇಶ್ವರ: ಕಜ ರಸ್ತೆಯ ಕಡವು ಮಖಾಂನಲ್ಲಿ ಕಳ್ಳತನ ನಡೆದಿದ್ದು, ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಹಣವನ್ನು ಕಳವು ಮಾಡಲಾಗಿದೆ. ಘಟನೆ ಕುರಿತು ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಉಸ್ತಾದ್ ಅಶ್ರಫ್ ಎಂಬವರು ಮಖಾಂನ ಬಾಗಿಲು ಮುಚ್ಚಿ ತೆರಳಿದ್ದರು. ಶನಿವಾರ ಬೆಳಗ್ಗೆ ಬಂದಾಗ ಮುಖ್ಯ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಮಖಾಂ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಹಣ ದೋಚಲಾಗಿದೆ. ಡಬ್ಬಿಯಲ್ಲಿ 10 ಸಾವಿರ ರೂ.ಗೂ ಅಧಿಕ ಹಣವಿರಬಹುದು ಎಂದು ಅಶ್ರಫ್ ಪೊಲೀಸರಿಗೆ ತಿಳಿಸಿದ್ದಾರೆ.
ಮಖಾಂ ಒಳಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನೂ ಒಡೆದು ಕಳವಿಗೆ ಯತ್ನಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಸೈ ಅರ್ಜುನ್ ಅರವಿಂದ್ ನೇತೃತ್ವದ ಮಂಜೇಶ್ವರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Next Story




