ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆ

ಯಾಸೀನ್ | ಸುಲ್ತಾನ್
ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕುಂಜತ್ತೂರು ನಿವಾಸಿಗಳಾದ ಯಾಸಿನ್ (13) ಹಾಗೂ ಸುಲ್ತಾನ್ (14) ನಾಪತ್ತೆಯಾದ ಬಾಲಕರು. ಶನಿವಾರ ಸಂಜೆ 5 ಗಂಟೆಯ ಬಳಿಕ ಇಬ್ಬರೂ ಕಾಣೆಯಾಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಾಲಕರ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭಿಸಿದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
Next Story




