ಮಂಜೇಶ್ವರ: ರೈಲು ಬಡಿದು ಇಬ್ಬರು ಮೃತ್ಯು

ಮನೀಶ್
ಮಂಜೇಶ್ವರ: ರೈಲು ಬಡಿದು ಇಬ್ಬರು ಮೃತಪಟ್ಟ ಎರಡು ಪ್ರತ್ಯೇಕ ಘಟನೆ ಮಂಗಳವಾರ ರಾತ್ರಿ ಮಂಜೇಶ್ವರ ರೈಲು ನಿಲ್ದಾಣ ಪರಿಸರದಲ್ಲಿ ನಡೆದಿದೆ.
ಮಂಜೇಶ್ವರ ದ ಲ್ಲಿ ವಾಸವಾಗಿರುವ ಮೂಲತಃ ಮೊಗ್ರಾಲ್ ಪುತ್ತೂರಿನ ಉಮೇಶ್ (39) ಮತ್ತು ಮಂಜೇಶ್ವರ ಕೀರ್ತೇಶ್ವರದ ಮನೀಶ್ (35) ಮೃತಪಟ್ಟವರು.
ಸಂಜೆ ಸುಮಾರು ಏಳು ಗಂಟೆ ವೇಳೆಗೆ ರೖಲು ಬಡಿದು ಮೃತಪಟ್ಟ ಸ್ಥಿತಿಯಲ್ಲಿ ಉಮೇಶ್ ರವರ ಮೃತದೇಹ ಪತ್ತೆಯಾಗಿದೆ. ರಾತ್ರಿ 9 ಗಂಟೆ ವೇಳೆಗೆ ರೖಲ್ವೇ ಹಳಿಯಲ್ಲಿ ಮನೀಶ್ ರವರ ಮೃತದೇಹ ಪತ್ತೆಯಾಗಿದೆ.
ಇಬ್ಬರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಸ್ಥಳ ಮಹಜರು ನಡೆಸಿದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.




