ಮಂಜೇಶ್ವರ: ಮಹಿಳೆಯ ಕತ್ತಿನಲ್ಲಿದ್ದ ಸರ ಕಳ್ಳತನ ಪ್ರಕರಣ; ಓರ್ವನ ಬಂಧನ

ಕಾಸರಗೋಡು: ಹಾಡಹಗಲೇ ಮಹಿಳೆಯ ಎರಡು ಪವನ್ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣದ ಓರ್ವ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.
ಕುಂಬಳೆ ಬಾಂಬ್ರಾಣದ ಎ. ಸಂದೀಪ್ (31) ಬಂಧಿತ ಆರೋಪಿ.
ಸೋಮವಾರ ಸಂಜೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹೊಸಂಗಡಿ ಬಳಿ ದಾರಿ ಕೇಳುವ ನೆಪದಲ್ಲಿ ಪೈವಳಿಕೆ ಬಾಯಿಕಟ್ಟೆಯ ನಯನ ಎಂಬ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಎಗರಿಸಿ ಪರಾರಿಯಾಗಿದ್ದರು.
ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾ ಕೇಂದ್ರೀಕರಿಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಇನ್ನೋರ್ವ ಆರೋಪಿ, ಚಿನ್ನದ ಸರ ಹಾಗೂ ಸ್ಕೂಟರ್ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Next Story




