ಕಾಸರಗೋಡು ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ದಿನೇಶ್ ನಿಧನ

ಕಾಸರಗೋಡು: ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ದಿನೇಶ್ ವಿ. (56) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಿಧನರಾದರು.
ಡೆಂಗ್ಯೂ ಜ್ವರ ದಿಂದ ಕುಂಬಳೆ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಜ್ವರ ಉಲ್ಬಣ ಗೊಂಡ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು .13 ದಿನಗಳ ಹಿಂದೆ ಯಷ್ಟೇ ಸೇವೆ ಯಿಂದ ನಿವೃತ್ತರಾಗಿದ್ದರು. ಮಂಜೇಶ್ವರ ಕುಂಜತ್ತೂರು ಸರಕಾರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ದಿನೇಶ್ ರವರು ಬಂಗ್ರ ಮಂಜೇಶ್ವರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಇಲಾಖೆಯ ಬಿಪಿಸಿ ಆಗಿಯೂ ಭೌತಿಕ ವಿಜ್ಞಾನ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದರು.
ಮಂಜೇಶ್ವರ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ದ ಇವರು ಸಾರ್ವಜನಿಕ ಶಿಕ್ಷಣ ಇಲಾಖಾ ನಿರ್ದೇಶನಾಲಯದಾದ ಲ್ಲೂ ಕಾರ್ಯನಿರ್ವಹಿಸಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷ ಣಾಧಿಕಾರಿಯಾಗಿ ಜನಾನುರಾಗಿದ್ದ ದಿನೇಶ್ ರವರು ಮೇ 31 ರಂದು ಸೇವೆ ಯಿಂದ ನಿವೃತ್ತ ರಾಗಿದ್ದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ನನ್ನು ಅಗಲಿದ್ದಾರೆ.





