ಕಾಸರಗೋಡು: ಆಸಿಫ್ ಅಲಿ ಪಾಡ್ಲಡ್ಕರ 'ಪ್ರವಾಸ ಜೀವಿತಂ ಯಾತ್ರೆಕಲ್' ಪುಸ್ತಕ ಬಿಡುಗಡೆ

ಕಾಸರಗೋಡು: ಆಸಿಫ್ ಅಲಿ ಪಾಡ್ಲಡ್ಕ ಅವರ 'ಪ್ರವಾಸ ಜೀವನ ಯಾತ್ರೆ' (ಪ್ರವಾಸ ಜೀವಿತಂ ಯಾತ್ರೆಕಲ್) ಕುರಿತ ಪುಸ್ತಕ ಕಾಸರಗೋಡು ನಗರಸಭಾ ವನಿತಾ ಭವನ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅವರು ಕಾಸರಗೋಡು ಸಾಹಿತ್ಯ ವೇದಿಯ ಉಪಾಧ್ಯಕ್ಷ ಶಾಫಿ ಅಲಿ ನೆಲ್ಲಿಕುನ್ನು ಅವರಿಗೆ ಪುಸ್ತಕ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಕೃತಿಕರ್ತ ಆಸಿಫ್ ಅಲಿ ಪಾಡ್ಲಡ್ಕ ಪುಸ್ತಕದ ಹಾಗೂ ಪ್ರವಾಸ ಜೀವನದ ಕುರಿತ ಅನುಭವಗಳನ್ನು ಹಂಚಿಕೊಂಡರು.
ಎನ್ ಸಿಪಿ (ಎಸ್) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝುಬೈರ್ ಪಡ್ಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಟಿ.ಎ.ಶಾಫಿ, ಪ್ರವಾಸ ಹಾಗೂ ಪುಸ್ತಕದ ಪರಿಚಯ ಮಾಡಿದರು.
ದುಬೈ ಕೆಎಂಸಿಸಿ ಜಿಲ್ಲಾಧ್ಯಕ್ಷ ಸಲಾಂ ಕನ್ಯಾಪಾಡಿ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಹನೀಫ್, ಕಾರ್ಯದರ್ಶಿ ನೂರುದ್ದೀನ್ ಅರಾಟ್ ಕಡವು, ಕಾಸರಗೋಡು ಸಾಹಿತ್ಯ ವೇದಿ ಕಾರ್ಯದರ್ಶಿ ಶಾಫಿ ನೆಲ್ಲಿಕುನ್ನು, ಸಿದ್ದೀಕ್ ಚೇರಂಗೈ, ಕುಂಬಳೆ ಅಕಾಡಮಿಕ್ ನಿರ್ದೇಶಕ ಖಲೀಲ್ ಮಾಸ್ಟರ್, ಜಾಬಿರ್ ಕುನ್ನಿಲ್, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಉಮರ್ ಪಾಡ್ಲಡ್ಕ, ಅಶ್ರಫ್ ನೆಲ್ತಡ್ಕ, ಫಯಾಝ್ ಖತರ್, ಪುಷ್ಪಕರ ಬೆಂಡಿಚ್ಚಾಲ್, ಕವಿ ಎಂ.ಪಿ ಜಿಲ್ಜಿಲ್, ಉಮರ್ ತಳಂಗರೆ, ರವೀಂದ್ರ ಪಾಡಿ, ಮಾಹಿನ್ ಮಾಸ್ಟರ್, ಅಬ್ದುಲ್ ರಹ್ಮಾನ್ ಪಡ್ಲಡ್ಕ, ಶರೀಫ್ ಏರಿಯಾಲ್, ಅಝೀಝ್ ಪಾಡ್ಲಡ್ಕ, ಮಿಷಾಲ್ ರಹ್ಮಾನ್ ಕುಂಬಳೆ ಮಾತನಾಡಿದರು. ಸಂಶುದ್ದೀನ್ ಮಾಸ್ಟರ್ ಸ್ವಾಗತಿಸಿದರು. ನಈಮುದ್ದೀನ್ ವಂದಿಸಿದರು.







