ಡಾ. ರಾಯನ್ ಮ್ಯಾಕ್ಲಿನ್ ಡಿಸೋಜಗೆ ರಾಷ್ಟ್ರಪತಿಯ ಚಿನ್ನದ ಪದಕ

ಕಾಸರಗೋಡು, ನ.21: ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೈವಳಿಕೆಯ ಯುವ ವೈದ್ಯ ಡಾ. ರಾಯನ್ ಮ್ಯಾಕ್ಲಿನ್ ಡಿಸೋಜರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ABVIMS) ಮತ್ತು ಡಾ.ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ 12ನೇ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಡಿ. ಪೀಡಿಯಾಟ್ರಿಕ್ಸ್ (ಮಕ್ಕಳ ವೈದ್ಯಕೀಯ) ವಿಭಾಗದಲ್ಲಿ ಸಾಧಿಸಿದ ಶ್ರೇಷ್ಠ ಸಾಧನೆಗಾಗಿ ಡಾ.ರಾಯನ್ ರಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು.
ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೊರೈಸಿದ ಡಾ. ರಾಯನ್, ಹೊಸದಿಲ್ಲಿಯ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಎಂ.ಡಿ. ಪೀಡಿಯಾಟ್ರಿಕ್ಸ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Next Story




