‘ಚಿಂತನ-ಮಂಥನ’ : ಸಿರಿಬಾಗಿಲು ಪ್ರತಿಷ್ಠಾನದಿಂದ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ರವಿವಾರ ಆಗಸ್ಟ್ 9ರಂದು ಬೆಳಗ್ಗೆ 10 ಗಂಟೆಯಿಂದ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ....!’ ಎಂಬ ಶೀರ್ಷಿಕೆಯ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ, ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಕುಂತಲಾ ರಮಾನಂದ ಭಟ್ ಇಡ್ಯಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್, ಇವರು ನೆರವೇರಿಸಲಿದ್ದಾರೆ. ಸಮಾವೇಶದ ಅಧ್ಯಕ್ಷತೆಯನ್ನು ಕಾಸರಗೋಡಿನ ಹಿರಿಯ ಕಲಾವಿದೆ ಹಾಗೂ ವಿಶ್ರಾಂತ ಪ್ರಾಧ್ಯಾಪಕಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿಯವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯಕ್ಷಗಾನದ ಹಿರಿಯ ಕಲಾವಿದರಾದ ಪುತ್ತೂರು ಶ್ರೀಧರ ಭಂಡಾರಿ ಅವರ ಪತ್ನಿ ಉಷಾ ಶ್ರೀಧರ ಭಂಡಾರಿ ಪುತ್ತೂರು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ನಿರ್ಮಲ ಹೆಗಡೆ ಶಿರಸಿ ಭಾಗವಹಿಸಲಿದ್ದಾರೆ.
ನಂತರ ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಲಿದೆ.
ಮಹಿಳೆಯರು ಮತ್ತು ಯಕ್ಷಗಾನದ ಭವಿಷ್ಯ.
ಯಕ್ಷಗಾನದಲ್ಲಿ ಮಹಿಳೆಯರು: ಅವಕಾಶ, ಸವಾಲು ಮತ್ತು ನಾಯಕತ್ವ, ಮಹಿಳಾ ಶಕ್ತಿ ಮತ್ತು ಯಕ್ಷಗಾನದ ಮುಂದಿನ ಪೀಳಿಗೆ.
ಯಕ್ಷಗಾನದ ಬೆಳವಣಿಗೆಯಲ್ಲಿ ಮಹಿಳೆಯರ ಪೂರಕ ಪಾತ್ರ.
ಭವಿಷ್ಯದ ಯಕ್ಷಗಾನ: ಮಹಿಳೆಯರ ದೃಷ್ಟಿ ಮತ್ತು ದಿಕ್ಕು.
ಮುಂತಾದ ವಿಷಯಗಳಲ್ಲಿ ಜಯಂತಿ ಎಸ್. ಹೊಳ್ಳ ಕೃಷ್ಣಾಪುರ, ಲಲಿತಾ ಭಟ್ ಕುಳಾಯಿ, ನಿರ್ಮಲ ಹೆಗಡೆ ಶಿರಸಿ, ಪದ್ಮ ಆಚಾರ್ ಪುತ್ತೂರು, ವೃಂದಾ ಕೊನ್ನಾರ್, ಮುಂತಾದವರು ಮಾತನಾಡಲಿದ್ದಾರೆ.
ಮಧ್ಯಾಹ್ನ 3:00ಕ್ಕೆ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದೆ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಕೃತಿ ಪುರಪ್ಪೆಮನೆ ಸಾಗರ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.






